ಗಾಂಜ ಹೊಂದಿದ್ದ ಓರ್ವನ ಬಂಧನ; 1 ಕೆ.ಜಿ. ಗಾಂಜ ವಶ

ಬಂಟ್ವಾಳ: ಗಾಂಜಾ ಹೊಂದಿದ್ದ ಓರ್ವ ವ್ಯಕ್ತಿಯನ್ನು ಶನಿವಾರ ಬಂಟ್ವಾಳದಲ್ಲಿ  ಬಂಧಿಸಲಾಗಿದೆ.. ಅಮೀರ್ ಹುಸೈನ್ (45) ಬಂಧಿತ‌ ಆರೋಪಿ. ಈತನನ್ನು ಬಂಟ್ವಾಳದ ತುಂಬೆ ಎಂಬಲ್ಲಿ ಬಂಧಿಸಲಾಗಿದ್ದು, 39,000 ಮೌಲ್ಯದ 1 ಕೆಜಿ 330 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತ ಮಂಗಳೂರಿನ ಮೂಡುಶೆಡ್ಡೆಯ ಓರ್ವ ವ್ಯಕ್ತಿಯಿಂದ ಗಾಂಜಾ ಪಡೆದಿದ್ದ ಎಂದು‌ ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ವಿಟ್ಲಾದಲ್ಲಿ ನಿರಂತರ ಖೋಟ ನೋಟು ಚಲಾವಣೆ; ಪತ್ತೆಗಾಗಿ‌ ಜನರ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ 500 ರೂಪಾಯಿಯ ಖೋಟಾ ನೋಟು ನಿರಂತರವಾಗಿ ಚಲಾವಣೆಯಾಗಿರೋದು ಪತ್ತೆಯಾಗಿದೆ. ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಗಳು 500 ರೂಪಾಯಿಯ ಖೋಟಾ ನೋಟು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇಲ್ಲಿ ಎರಡು ಖೋಟಾ ನೋಟು ಪತ್ತೆಯಾಗಿದೆ. ಕೆಲ ಭಾಗಗಳಲ್ಲಿ ಅಂಗಡಿ ಮಾಲಕರು ಇಲ್ಲದ ಬಗ್ಗೆ ಮಾಹಿತಿ ಪಡೆದು ಖೋಟಾ ನೋಟು ಚಲಾವಣೆಗಾರರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇದೇ ರೀತಿ ಹಲವು ಅಂಗಡಿಗಳಲ್ಲಿ 500 ರೂಪಾಯಿಯ […]

ಬಂಟ್ವಾಳ: ರಮಾನಾಥ ರೈ ಅವರಿಂದ ಡ್ಯಾಂ ಕಾಮಗಾರಿ‌ ವೀಕ್ಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಹಾಗೂ ಸಂಗಬೆಟ್ಟು ಗ್ರಾಮದ ಮಂಜನ್‌ದೊಟ್ಟುವಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಡ್ಯಾಮ್ ಕಾಮಗಾರಿಯನ್ನು ಶುಕ್ರವಾರ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ವೀಕ್ಷಿಸಿದರು. ಈ ಸಂದರ್ಭ‌ ಮಾತನಾಡಿದ ಅವರು ೩ ಜಿಲ್ಲೆಗೆ ಸೇರಿರುವ ಈ ಪಶ್ಚಿಮ ವಾಹಿನಿ ಯೋಜನೆ ಸುಮಾರು ೨೬೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ೮೦ ಕೋಟಿ ಉಡುಪಿ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಗೆ ೩೫ ಜೋಟಿ ಅನುದಾನ […]