ಬಂಟಕಲ್ಲು: ಜ.18ಕ್ಕೆ ಕನಕಾಂಗಿ ಗಂಧರ್ವ ಕನ್ಯೆ ಯಕ್ಷಗಾನ ಪ್ರದರ್ಶನ

ಉಡುಪಿ: ನಗರಬೆಟ್ಟು ಗೋಪಾಲನಾಯಕ್ ಮತ್ತು ಮಕ್ಕಳ ವತಿಯಿಂದ ನೆರವೇರಿಸಲ್ಪಡುವ ಚಂಡಿಕಾಹವನ ಪ್ರಯುಕ್ತ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಳಿಕೆಯಲ್ಲಿ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೇ ಜ.18ರಂದು ಮಧ್ಯಾಹ್ನ 1.30ರಿಂದ “ಕನಕಾಂಗಿ ಗಂಧರ್ವ ಕನ್ಯೆ” ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರಾಘವೇಂದ್ರ ಆಚಾರ್ ಜನ್ಸಾಲೆ. ಮದ್ದಲೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ – ರಾಕೇಶ್ ಮಲ್ಯ ಮತ್ತು ಕೋಟ ಶಿವಾನಂದ. ಮುಮ್ಮೇಳ: ಸ್ತ್ರೀ ವೇಷ – ಶಶಿಕಾಂತ್ ಶೆಟ್ಟಿ, ವಂಡಾರು […]