ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಿಕ್ಕಮಕ್ಕಳಲ್ಲಿ ಪ್ರಾರಂಭಿಕ ಹಂತದ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದ ಅಭಿವೃದ್ಧಿ

ಬಂಟಕಲ್: ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂಸ್ಪೆಕ್ಟ್ರಮ್ ಡಿಸಾರ್ಡರ್ ಕಾಯಿಲೆಯನ್ನು ಯಂತ್ರ ಕಲಿಕಾತಂತ್ರಜ್ಞಾನವನ್ನು ಬಳಸಿಕೊಂಡು ಪತ್ತೆಮಾಡುವ ಯಂತ್ರವನ್ನು ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್ ಇವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿಯಾದ ಸವಿತಾ ಶೆಣೈ ಇವರಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಎಂಬುದು ನರಮಂಡಲದಬೆಳವಣಿಗೆಯಲ್ಲಿನ ನ್ಯೂನತೆಯಾಗಿದ್ದು ಅದು ಒಂದುಮಗುವಿನ ನಡವಳಿಕೆ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರದ ಮೂಲಕ ತಾಂತ್ರಿಕ ಅಧ್ಯಯನ ತಂತ್ರಗಳನ್ನು ಬಳಸಿಕೊಂಡು […]