ಶಿವಮೊಗ್ಗ ಲಯನ್ಸ್​ಗೆ ರೋಚಕ ಗೆಲುವು: ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಶರತ್

ಬೆಂಗಳೂರು: ಟಾಸ್​ ಗೆದ್ದ ಶಿವಮೊಗ್ಗ ಬೌಲಿಂಗ್​ ಆಯ್ಕೆ ಮಾಡಿಕೊಂಡು ಗುಲ್ಬರ್ಗಕ್ಕೆ ಬ್ಯಾಟಿಂಗ್​ ಮಾಡುವಂತೆ ಆಹ್ವಾನಿಸಿತು. ಲಯನ್ಸ್​ ಬೌಲಿಂಗ್​ ದಾಳಿಗೆ ಸಿಲುಕಿದ ಗುಲ್ಬರ್ಗ ಆರಂಭಿಕ ಆಘಾತ ಎದುರಿಸಿತು. ಮೊದಲ ಓವರ್‌ನಲ್ಲಿಯೇ ಎಲ್‌.ಆರ್.ಚೇತನ್ ರನೌಟಿಗೆ ಬಲಿಯಾದರು. ನಂತರ ಬಂದ ಸೌರಭ್ ಮುತ್ತೂರ್ ಕೂಡ ವಿ.ಕೌಶಿಕ್‌ಗೆ ವಿಕೆಟ್ ಒಪ್ಪಿಸಿ ಬಹುಬೇಗ ನಿರ್ಗಮಿಸಿದರು. ಮೂರನೇ ವಿಕೆಟ್‌ಗೆ ಆದರ್ಶ್ ಪ್ರಜ್ವಲ್ (43), ಆರ್.ಸ್ಮರಣ್ (40) ಜೊತೆಯಾಟವಾಡಿ 77 ರನ್ ಕಲೆಹಾಕುವ ಮೂಲಕ 10 ಓವರ್‌ಗಳಲ್ಲಿ ತಂಡದ ಸ್ಕೋರ್​ ಅನ್ನು 86ಕ್ಕೆ ಕೊಂಡೊಯ್ದರು. ಮಹಾರಾಜ ಟ್ರೋಫಿ […]