ಪಾಕಿಸ್ತಾನಕ್ಕೆ 368 ರನ್‌ಗಳ ಬೃಹತ್​ ಗುರಿ : ಆಸ್ಟ್ರೇಲಿಯಾ ಆರಂಭಿಕರ ಸಿಡಿಲಬ್ಬರದ ಬ್ಯಾಟಿಂಗ್

ಬೆಂಗಳೂರು: 5 ಬಾರಿ ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾ ತಂಡ ಈ ವರ್ಷ ಮೊದಲೆರಡು ಪಂದ್ಯಗಳನ್ನು ಬ್ಯಾಟಿಂಗ್​ ವೈಫಲ್ಯದಿಂದ ಸೋತರೆ, ಮೂರನೇ ಪಂದ್ಯದಲ್ಲಿ ಸಾಧಾರಣ ಪ್ರದರ್ಶನದಿಂದ ಗೆಲುವು ದಾಖಲಿಸಿತ್ತು.ಆದರೆ ಇಂದಿನ ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದು, ಪಾಕಿಸ್ತಾನದ ವಿರುದ್ಧ ದೊಡ್ಡ ಇನ್ನಿಂಗ್ಸ್​ ಕಟ್ಟಿದೆ. ಆರಂಭಿಕರಾದ ಡೇವಿಡ್​ ವಾರ್ನರ್​ ಮತ್ತು ಮಿಚೆಲ್​ ಮಾರ್ಷ್ ಅವರ ಅಬ್ಬರದ ಶತಕದ ನೆರವಿನಿಂದ ತಂಡವು ನಿಗದಿತ ಓವರ್‌ಗಳ​ ಅಂತ್ಯಕ್ಕೆ 9 ವಿಕೆಟ್​ ನಷ್ಟಕ್ಕೆ 367 ರನ್​ ಗಳಿಸಿತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು […]