3,289 ಕೋಟಿ ಮೌಲ್ಯದ ಆರ್ಡರ್​ ಪಡೆದ ಬಿಇಎಲ್​: ಚಂದ್ರಯಾನ-3ರ ಎಫೆಕ್ಟ್

ಬೆಂಗಳೂರು: ನವರತ್ನ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಭಾರತ್​​ ಎಲೆಕ್ಟ್ರಿಕಲ್​ ಲಿಮಿಟೆಡ್​​ (ಬಿಇಎಲ್​) ಈ ವರ್ಷದ ಅಂದರೆ 2023 ಜುಲೈ ಮತ್ತು ಆಗಸ್ಟ್​​ನಲ್ಲಿ 3,289 ಕೋಟಿ ಮೊತ್ತದ ಹೊಸ ರಕ್ಷಣ ಮತ್ತು ರಕ್ಷಣೆತ್ತರ ಆರ್ಡರ್​ ಅನ್ನು ಪಡೆಯುವ ಮೂಲಕ ಸಾಧನೆ ಮಾಡಿದೆ. ಉದ್ಯಮದ ವಿವಿಧ ರೀತಿಯ ಎಲೆಕ್ಟ್ರಾನಿಕ್​ ಸಾಧನಗಳ ಪೂರೈಕೆಯನ್ನು ಈ ಆರ್ಡರ್​​ ಹೊಂದಿದೆ. ಇದರಲ್ಲಿ ಕಡಿಮೆ ಮಟ್ಟದ ಲೈಟ್​ ವೈಟ್​ ರಾಡಾರ್​​, ಸೋನಾರ್ಸ್​, ಐಎಫ್​ಎಫ್​ ವ್ಯವಸ್ಥೆ, ಸ್ಟಾಟ್​ಕೊಮ್​ ವ್ಯವಸ್ಥೆ, ಇಒ/ಐಆರ್​ ಪೇಲೋಡ್​, ಟಿಆರ್​ಎಂ/ಡಿಟಿಆರ್​ಎಂಗಳು, ಜಾಮರ್​​, ಎನಕ್ರಿಪ್ಟರ್ಸ್​​, […]