Tag: #ayodye #rama mandira #vishveshvara swamiji #honorary
-
ರಾಮಜನ್ಮಭೂಮಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಗಳಿಗೆ ಗೌರವ ಸಮರ್ಪಣೆ
ಉಡುಪಿ: ಅಯೋಧ್ಯೆ ರಾಮಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ರಾಮಜನ್ಮಭೂಮಿ ಆಂದೋಲನದಲ್ಲಿ ಸುದೀರ್ಘ ಅವಧಿಗೆ ಮುಂಚೂಣಿಯಲ್ಲಿದ್ದು, ಮಾರ್ಗದರ್ಶನ, ಸಲಹೆ ನೀಡಿದ ಪೇಜಾವರ ಮಠಾಧೀಶರಾಗಿದ್ದ ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಪಾದರ ಪೀಠ, ಭಾವಚಿತ್ರಕ್ಕೆ ಉಡುಪಿ ಪೇಜಾವರ ಮಠದಲ್ಲಿ ಬುಧವಾರ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ಬೆಳಗಿ ಭಕ್ತಿ ಗೌರವ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರಿಗೆ ಸಿಹಿತಿಂಡಿ ವಿತರಿಸಲಾಯಿತು. ಮಠದ ದಿವಾನರಾದ ಎಂ. ರಘುರಾಮ ಆಚಾರ್ಯ, ಸಂತೋಷ್, ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.