ಆಟೋ ರಿಕ್ಷಾ-ಖಾಸಗಿ ಬಸ್ ಢಿಕ್ಕಿ‌; ತಂದೆ ಮಗನಿಗೆ ಗಾಯ

ಉಡುಪಿ: ಆಟೋ ರಿಕ್ಷಾ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ತಂದೆ ಮತ್ತು ಮಗ ಗಂಭೀರ ಗಾಯಗೊಂಡ ಘಟನೆ ಉಡುಪಿ ಸಮೀಪದ ಕೊರಂಗ್ರಪಾಡಿ ಎಂಬಲ್ಲಿ ಬುಧವಾರ ಸಂಭವಿಸಿದೆ. ಉಡುಪಿಯಿಂದ ಕಾರ್ಕಳ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸ್ ಹಾಗೂ ಬುಡ್ನಾರು ನಿವಾಸಿ ರಿಯಾಸ್ ತನ್ನ ಮಗನನ್ನು ವಿಶೇಷ ತರಗತಿಗೆ ಎಮ್‍ಇಟಿ ಉದ್ಯಾವರ ಶಾಲೆಗೆ ತನ್ನದೇ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ  ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ […]