ಆಟೋ ರಿಕ್ಷಾಗಳ ಲಭ್ಯತೆ ತಿಳಿಯಲು ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ರೆಡಿ ಮಾಡಿದ್ರು ‘ಆಟೋ ಪ್ಲೀಸ್’ ಉಚಿತ ಎಪ್ಲಿಕೇಶನ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ‘ಆಟೋ ಪ್ಲೀಸ್’ ಎಂಬ ಒಂದು ವಿನೂತನ ಎಪ್ಲಿಕೇಶನ್ನೊಂದನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪರಿಚಯಿಸಿದೆ. ಈ ಎಪ್ಲಿಕೇಶನ್‌ನ ಮೂಲಕ ಸಾರ್ವಜನಿಕರು ತಮ್ಮ ಸಮೀಪದ ರಿಕ್ಷಾ ನಿಲ್ದಾಣವನ್ನು ಅಯ್ಕೆ ಮಾಡಿದಲ್ಲಿ, ಅಲ್ಲಿ ಸಂಚಾರಕ್ಕೆ ಲಭ್ಯವಿರುವ ಆಟೋರಿಕ್ಷಾಗಳ ಪಟ್ಟಿಯು ದೊರೆಯಲಿದೆ. ಇದರೊಂದಿಗೆ ಚಾಲಕನ ಹೆಸರು, ಭಾವಚಿತ್ರ, ಲೈಸನ್ಸ್ ಮುಂತಾದ ವಿವಿರಗಳನ್ನು ಪರಿಶೀಲಿಸಬಹುದಾಗಿದೆ. ಪಟ್ಟಿಯಲ್ಲಿ ಇರುವ ಚಾಲಕರ ಮಾಹಿತಿಯನ್ನು ಗಮನಿಸಿ ಆ ರಿಕ್ಷಾ ಚಾಲಕನಿಗೆ ಕರೆಮಾಡುವ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದೆ. ಈ ಎಪ್ಲಿಕೇಶನ್ ಉಚಿತವಾಗಿದ್ದು, ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್ಲೋಡ್ […]