ಉಡುಪಿ: ನ.1 ರಂದು ಅದಿತಿ ಗ್ಯಾಲರಿಯಲ್ಲಿ ವಸಂತ ಕಲಾ ಚಿತ್ರಕಲಾ ಪ್ರದರ್ಶನ

ಉಡುಪಿ: ಬದುಕೆಂಬುದನ್ನು ಕಲೆಯಾಗಿ ತಿಳಿದು, ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ (1960-2022) ಅವರು. ಕಾಲೇಜು ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯ್ಯಾಡಿಸಿದರು. ಖ್ಯಾತ ಸಂಗೀತ ಕಲಾವಿದೆ ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (2013) ವಸಂತಲಕ್ಷ್ಮೀ ಯವರು ದುಃಖದ ಮಡುವಿನಿಂದ ಮರೆಯಾಗಲು ಸಾಧನವಾಗಿ ಆಯ್ದುಕೊಂಡದ್ದು ಚಿತ್ರಕಲೆ. ಆಯಿಲ್, ಅಕ್ರಿಲಿಕ್, ಪೆನ್ಸಿಲ್ ಡ್ರಾಯಿಂಗ್ ಮಾಧ್ಯಮಗಳನ್ನು ಬ್ರಷ್- ನೈಫ್ – ಸ್ಕ್ಯಾಲ್ಪೆಲ್ ಸಾಧನಗಳನ್ನು ಬಳಸಿ […]