ಅಸ್ಸಾಂ: ಮಳೆ, ಭೂಕುಸಿತಕ್ಕೆ 20 ಜನ ಬಲಿ

ಅಸ್ಸಾಂನಲ್ಲಿ ಭಾರಿ ಮಳೆ, ಭೂಕುಸಿತ ಸಂಭವಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕಛಾರ್, ಕರೀಮ್‌ಗಂಜ್ ಮತ್ತು ಹೈಲಾಕಂಡಿಗಳಲ್ಲಿ ಮಂಗಳವಾರ ನಸುಕಿನಲ್ಲಿ ಮಳೆಯಾಗಿ ಭೂಕುಸಿತ ಸಂಭವಿಸಿದೆ.  ಕಛಾರ್ ನ ಕೋಲಾಪುರ್ ಗ್ರಾಮದಲ್ಲಿ ಬೆಳಿಗ್ಗೆ ಐದು ಗಂಟೆಯ ವೇಳೆಗೆ ಒಂದೇ ಕುಟುಂಬದ ಏಳು ಮಂದಿ ಭೂಕುಸಿತದಲ್ಲಿ  ಮೃತಪಟ್ಟಿದ್ದಾರೆ. ಕರೀಮ್‌ಗಂಜ್ ಜಿಲ್ಲೆಯ ಮೋಹನ್‌ಪುರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಏಳು ಮಂದಿ ಹಾಗೂ ಹೈಲಾಕಂಡಿಯಲ್ಲಿ ಆರು ಮಂದಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಮನೆಯ ಮೇಲೆ ಭೂಕುಸಿತಗೊಂಡಗ ಇವರೆಲ್ಲ ನಿದ್ರಿಸುತ್ತಿದ್ದರು […]