ಅಶ್ವಿನ್ – ಜಡ್ಡು ಸ್ಪಿನ್ ದಾಳಿ ಹೊಗಳಿದ ನಾಯಕ ರೋಹಿತ್

ಡೊಮಿನಿಕಾ(ವೆಸ್ಟ್ ಇಂಡೀಸ್): ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್, ಹಿರಿಯ ಆಟಗಾರ ಆರ್ ಅಶ್ವಿನ್ ಅವರ ಸ್ಪಿನ್ಮಾಂತ್ರಿಕತೆಗೆ ತರಗೆಲೆಯಂತೆ ಉದುರಿದ ವಿಂಡೀಸ್ ಬ್ಯಾಟಿಂಗ್ ಪಡೆ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡದೇ ಸೋಲೊಪ್ಪಿಕೊಂಡಿತು.ಯುವ ಪಡೆಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡ ಮೊದಲ ಟೆಸ್ಟ್ನಲ್ಲಿ ಕೆರೆಬಿಯನ್ನರ ವಿರುದ್ಧ ಇನಿಂಗ್ಸ್ ಮತ್ತು 141 ರನ್ ವಿಕ್ರಮ ಸಾಧಿಸಿದೆ.ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಸ್ಪಿನ್ ದ್ವಯರಾದ ಅಶ್ವಿನ್- […]