ಆಗಸ್ಟ್ 21ರಂದು ಸಿಇಟಿ ಫಲಿತಾಂಶ ಪ್ರಕಟ

ಬೆಂಗಳೂರು: ಸಿಇಟಿ ಪರೀಕ್ಷೆಯ ಫಲಿತಾಂಶ ನಾಳೆಯ (ಆ.20) ಬದಲಾಗಿ ಆಗಸ್ಟ್ 21ರಂದು ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ನಾಳೆ ಪ್ರಕಟಗೊಳ್ಳಬೇಕಿದ್ದ ಸಿಇಟಿ ಫಲಿತಾಂಶವನ್ನು ತಾಂತ್ರಿಕ ಕಾರಣದಿಂದ ಒಂದು ದಿನ ಮುಂದೂಡಲಾಗಿದೆ ಎಂದು ಅವರು ಮಾಹಿತಿ‌ ನೀಡಿದ್ದಾರೆ.