ಆಹಾ ಏನ್ ಚೆಂದ ಈ ಹಾಸ್ಟೆಲ್ some ಬಂಧ : ಅರ್ಪಿತಾ ನೆರಿಯ ಬರೆದ ಬರಹ

        ಅರ್ಪಿತಾ ನೆರಿಯ ಪ್ರಥಮ ಪತ್ರಿಕೋದ್ಯಮ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಹಾಸ್ಟೆಲ್ ಜೀವನ ಒಂದು ಮುಗಿಯದ ನೆನಪು ಹಾಗೂ ಮಧುರವಾದ ಪಯಣ. ಹಾಸ್ಟೆಲ್ ಜೀವನದ ಸಿಹಿ ಕಹಿ ನೆನಪನ್ನು ಹಾಸ್ಟೆಲ್ ವಾಸಿಯಾಗಿದ್ದವರು ಮೆಲುಕು ಹಾಕುತ್ತಲೇ ಇರುತ್ತಾರೆ ಬಿಡಿ. ಹಾಸ್ಟೆಲ್ ಎಂದರೆ ಕೋಪ, ಜಗಳ, ಸಂತೋಷ, ಹಾಗೂ ತರ್ಲೆಗಳ ಪಾಠಶಾಲೆ.  ಒಮ್ಮೆ ಹಾಸ್ಟೆಲ್ ಜೀವನ ಮುಗಿದರೆ ಮುಂದೆಂದೂ ಬೇಕು ಬೇಕು ಎಂದರೂ ಅದು ಮತ್ತೆಂದೂ ಮರಳಿಬಾರದು. ನಾನು ಕೂಡ ಹಾಸ್ಟೆಲ್ ಕುಟುಂಬದ ಸದಸ್ಯೆ. […]