ನಾವೆಲ್ಲರೂ ಆನ್​ಲೈನ್​ ದ್ವೇಷದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ ವಿಶ್ವಸಂಸ್ಥೆ ಅಧ್ಯಕ್ಷರು

ಹೈದರಾಬಾದ್: ಆನ್‌ಲೈನ್ ದ್ವೇಷವನ್ನು ಹತ್ತಿಕ್ಕಲು ಮತ್ತು ಸಾಮಾಜಿಕ ಒಗ್ಗಟ್ಟಿನಲ್ಲಿ ನಿಮ್ಮನ್ನ ನೀವು ತೊಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ. “ದ್ವೇಷವು ಪ್ರತಿಯೊಬ್ಬರಿಗೂ ಅಪಾಯವನ್ನು ತಂದೊಡ್ಡಲಿದೆ. ಆದ್ದರಿಂದ ಅದರ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಕೆಲಸವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಭದ್ರತಾ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು. ಆನ್‌ಲೈನ್‌ನಲ್ಲಿ ಹರಡುತ್ತಿರುವ ದ್ವೇಷವನ್ನು ನಾವು ಹತ್ತಿಕ್ಕಲು ಪ್ರಯತ್ನಿಸಬೇಕು. ದ್ವೇಷವು ಮಾನವೀಯತೆಯ ಕೆಟ್ಟ ಪ್ರಚೋದನೆಗಳನ್ನು ತುಂಬುತ್ತದೆ. ಇದು ಧ್ರುವೀಕರಣ ಮತ್ತು ಆಮೂಲಾಗ್ರೀಕರಣಕ್ಕೆ ವೇಗವರ್ಧಕವಾಗಿದೆ ಮತ್ತು ದೌರ್ಜನ್ಯ […]