‘ಮಹಿಳೆಯ ಬ್ಯಾಗ್ ಸುಲಿಗೆ ಪ್ರಕರಣ’: ಇಬ್ಬರು ಆರೋಪಿಗಳ‌ ಬಂಧನ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಂಸಿ ಆಸ್ಪತ್ರೆಯ ಬಾಳಿಗಾ ಬ್ಲಾಕ್ ಬಳಿ ಡಿ.25ರಂದು ನಡೆದ ಒಂಟಿ ಮಹಿಳೆಯ ಬ್ಯಾಗ್ ಕಸಿದುಕೊಂಡು 87 ಸಾವಿರ ಮೌಲ್ಯದ ಸೊತ್ತುಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿದ ಮಣಿಪಾಲ ಪೊಲೀಸರು, ಆರೋಪಿಗಳಾದ ಉದ್ಯಾವರ ಗ್ರಾಮದ ನಿವಾಸಿ ಮಹ್ಮದ್ ಫಹಾದ್ (19) ಹಾಗೂ ಇನ್ನೊರ್ವ ಬಾಲಕನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಈ ಇಬ್ಬರು ಆರೋಪಿಗಳು ಡಿ.25ರಂದು ಮಣಿಪಾಲ ಕೆಎಂಸಿ […]