ಉಡುಪಿ: ಅಂಗನವಾಡಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಅಂಗನವಾಡಿ ಒಳಗೆ ಶಿಸ್ತಿನಿಂದ ಒಳಬಂದವರನ್ನು ಪಿಳಿಪಿಳಿ ಕಣ್ಣಿಬಿಟ್ಟು ನೋಡುತ್ತಿದ್ದ ಮುದ್ದುಮಕ್ಕಳು ಒಂದೆಡೆಯಾದರೆ, ಒಳಬಂದ ಅಧಿಕಾರಿಯನ್ನು ಕಂಡು ಹೆದರಿ ಬೆವರುತ್ತಿದ್ದ ಅಂಗನವಾಡಿ ಸಹಾಯಕಿ ಇನ್ನೊಂದೆಡೆ, ಈ ದೃಶ್ಯ ಕಂಡು ಬಂದದ್ದು, ಕಾರ್ಕಳ ತಾಲೂಕಿನ ಸೂಡ ಗ್ರಾಮದ ಕಾಪಿಕಾಡು ಅಂಗನವಾಡಿ ಕೇಂದ್ರದಲ್ಲಿ, ಈ ಅಂಗನವಾಡಿಯೊಳಗೆ ಶಿಸ್ತಿನಿಂದ ಬಂದ ಅಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು. ಮಂಗಳವಾರ ಕಾರ್ಕಳ ತಾಲೂಕಿನ ಸೂಡದಲ್ಲಿ ಸ್ಥಳ ಪರಿಶೀಲನೆಗಾಗಿ, ಉಡುಪಿಯಿಂದ ಬೆಳಗ್ಗೆಯೇ ತೆರಳಿದ್ದ, ಜಿಲ್ಲಾಧಿಕಾರಿ ಜಿ.ಜಗದೀಶ್, ತಮ್ಮ ಬಿಡುವಿಲ್ಲದ ಕಾರ್ಯದ ನಡುವೆಯೇ, ಮಾರ್ಗಮಧ್ಯೆ […]