‘ಅಂದಾಜಿ ಆಪುಜಿ’ ನಾಟಕಕ್ಕೆ ಮುಹೂರ್ತ, ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದ ಬದಲಾವಣೆ ಸಾಧ್ಯ: ಶಶಿಧರ್ ಶೆಟ್ಟಿ

ಕಾರ್ಕಳ: ನಾಟಕಗಳು ಕಲಾಭಿಮಾನಿಗಳನ್ನು ರಂಜಿಸುವುದರ ಜತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿ ಆ ಮೂಲಕ ಸಮಾಜದ ಬದಲಾವಣೆಯಲ್ಲಿ ಶ್ರಮಿಸಬೇಕಾಗಿದೆ. ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಹೇಳಿದರು. ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನದಲ್ಲಿ ಶುಕ್ರವಾರ ನಡೆದ ತುಳುವ ಸಿರಿ ಕಲಾವಿದರು ಬೆಳ್ಮಣ್ ಇವರ ಅಭಿನಯದ ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ ರಚಿಸಿದ ಈ ವರ್ಷದ ವಿನೂತನ ನಾಟಕ ‘ಅಂದಾಜಿ ಆಪುಜಿ’ ಇದರ ಶುಭ ಮುಹೂರ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. […]