ಆಳ್ವಾಸ್ ಕಾಲೇಜು:”ಬರಹಗಾರರ ಬಳಗ- ಬರವಣಿಗೆಗಾಗಿ ಮೆರವಣಿಗೆ” ಕಾರ್‍ಯಕ್ರಮ

ಮೂಡಬಿದ್ರೆ : ಟೀಕೆ, ವಿಮರ್ಶೆಯನ್ನು ಸ್ವೀಕರಿಸುವವನು ಮಾತ್ರ ನಿಜವಾದ ಬರಹಗಾರನಾಗುತ್ತಾನೆ. ಓದು ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡಲ್ಲಿ ಬರವಣಿಗೆ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಎಂದು ಬೆಂಗಳೂರಿನ ಕುವೆಂಪು ಭಾಷಾಭಾರತಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಹೇಳಿದರು. ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್‌ನಲ್ಲಿ ವೃತ್ತಿಪರ ವಾಣಿಜ್ಯ ವಿಭಾಗ ಆಯೋಜಿಸಿದ ”ಬರಹಗಾರರ ಬಳಗ- ಬರವಣಿಗೆಗಾಗಿ ಮೆರವಣಿಗೆ” ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬರವಣಿಗೆಗೆ ವಸ್ತು ಮತ್ತು ವಿಷಯ ಬಹಳ ಮುಖ್ಯ. ಬರಹಗಾರರು ವಿಷಯದ ಬಗ್ಗೆ ಸ್ಥಿತ ಪ್ರಜ್ಞರಾಗಿರಬೇಕು. […]