ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಬರಹ ಕೌಶಲ ಕಾರ್ಯಗಾರ

ಅಲಂಗಾರು: ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಜ್ಞಾನದ ಪರಿಧಿಯನ್ನು ಒಂದೇ ವಿಷಯಕ್ಕೆ ಸೀಮಿತವಾಗಿಸದೇ ಎಲ್ಲ ವಿಚಾರಗಳನ್ನು ಅರಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ಪ್ರಜಾವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕ ಡಾ. ಗಣೇಶ್ ಅಮೀನ್‌ಗಡ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಅಲಂಗಾರಿನ ಪಂಡಿತ್ ರೆಸಾರ್ಟ್‌ನಲ್ಲಿ ಆಯೋಜಿಸಲಾದ ಒಂದು ದಿನದ ಬರಹ ಕೌಶಲ ಕಾರ್ಯಗಾರದಲ್ಲಿ ಮಾತನಾಡಿದರು. ಸತತ ಓದು ಹಾಗೂ ಜಿಜ್ಞಾಸೆಯ ಮನೋಭಾವದಿಂದ ಬರವಣಿಗೆ ಸಾಧ್ಯ. ಪ್ರತಿಯೊಬ್ಬರೂ ತಮ್ಮದೇ ಶೈಲಿಯ ಬರವಣಿಗೆ ಬೆಳೆಸಿಕೊಳ್ಳಬೇಕು. ವಿವಿಧ ಪತ್ರಿಕೆಯ ಅಂಕಣಗಳಿಗೆ ತಮ್ಮ ಬರಹಗಳನ್ನು […]