ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಬೃಹತ್ ಶೋಭಾಯಾತ್ರೆ

ಅಜೆಕಾರು: ಕಾರ್ಕಳ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಅದ್ದೂರಿ ಶೋಭಾಯಾತ್ರೆ ಏಪ್ರಿಲ್16 ರಂದು ಭಾನುವಾರ ನಡೆಯಿತು. ಅಜೆಕಾರು ರಾಮ ಮಂದಿರದಿಂದ ಆರಂಭಗೊಂಡ ನೂತನ ರಥ ಸಮರ್ಪಣೆ ಶೋಭಾಯಾತ್ರೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಜಿ.ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಜಯ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಟಿನಿ, ಜಯಕರ ಶೆಟ್ಟಿ, ಸುಜಯ ಶೆಟ್ಟಿ, ಪ್ರಶಾಂತ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು. […]