ನಾಯಕ್ ಮಾಮನ “ಲಾಯಕ್” ಊಟ: ಆಗುಂಬೆಗೆ ಬಂದ್ರೆ ಈ ಹೊಟೇಲ್ ಊಟ ಮಿಸ್ ಮಾಡ್ಕೊಬೇಡಿ

ಕ್ಯಾಬೆಜ್ ಅಂಬೊಡೆ, ಗುಳ್ಳದ ಪೋಡಿ, ಬಿಸಿ ಬಿಸಿ ಇಡ್ಲಿ ಸಾಂಬರ್, ಮಧ್ಯಾಹ್ನಕ್ಕೆ ಅನ್ನ, ತಿಳಿ ಸಾರು, ದಾಳಿತೊವ್ವೆ, ರುಚಿ ರುಚಿ ಉಪ್ಪಿನಕಾಯಿ, ಅಲಸಂಡೆ ಉಪ್ಕರಿ, ಬಿಟ್ರೂಟ್ ಪಲ್ಯ, ರಸಂ, ದೊಡ್ಡದ್ದೊಂದು ಹಪ್ಪಳ ಇವೆಲ್ಲ ಆಗುಂಬೆಯ ಸುರೇಂದ್ರ ನಾಯಕ್ ಮಾಮನ ಮನೆಯಂತಹ ಹೊಟೇಲಿನ ಬಾಯಿಬಿರಿಸೋ ಖಾದ್ಯಗಳು.ಆಗುಂಬೆ-ಕೊಪ್ಪ ದಾರಿಯಲ್ಲಿ ಸುಮಾರು 40 ವರ್ಷಗಳಿಂದಲೂ ಗುರುಪ್ರಸಾದ್ ಹೊಟೇಲ್ ನಡೆಸುತ್ತಿರುವ ನಾಯಕ್ ಮಾಮನ ಹೊಟೇಲ್‌ನಲ್ಲಿ ಕೂತು ಊಟ ಮಾಡುತ್ತಲೋ, ಅಂಬೊಡೆ ಮುಕ್ಕುತ್ತಲೋ‌‌ ಆಗುಂಬೆಯ ಕಾಡನ್ನು ನೋಡುವುದೇ ಒಂದು ಚೆಂದ ಅನುಭವ‌.     […]