ಅಕಾಸಾ ಏರ್ ಕಂಪನಿ : ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ

ನವದೆಹಲಿ : ಬಜೆಟ್ ಸ್ನೇಹಿ ವಿಮಾನಯಾನ ಸಂಸ್ಥೆ ಅಕಾಸಾ ಏರ್ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಕಂಪನಿಯು ಡಿಸೆಂಬರ್​ನಲ್ಲಿ ಅಂತಾರಾಷ್ಟ್ರೀಯ ಹಾರಾಟ ಪ್ರಾರಂಭಿಸಲು ಸಜ್ಜಾಗಿದೆ. ಅಕಾಸಾ ಏರ್​ ವಿಮಾನಯಾನ ಕಂಪನಿಯು ಇದೇ ಡಿಸೆಂಬರ್​ನಿಂದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭಿಸಲಿದೆ. ದುಬೈ ಮತ್ತು ದೋಹಾದಂತಹ ಪ್ರಮುಖ ಭಾರತ-ಮಧ್ಯಪ್ರಾಚ್ಯ ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ಸಂಚಾರ ಅನುಮತಿಗಳನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿರುವುದು ಗಮನಾರ್ಹ. “ಅಕಾಸಾ ಏರ್ (ಮೆಸರ್ಸ್ ಎಸ್‌ಎನ್​ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್) ನಿಗದಿತ ಅಂತಾರಾಷ್ಟ್ರೀಯ ವಾಹಕ […]