ಸೌರ ಜ್ವಾಲೆಗಳ ಮೊದಲ ನೋಟವನ್ನು ಸೆರೆಹಿಡಿದ ಆದಿತ್ಯ-L1; ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಇಸ್ರೋ

ಬೆಂಗಳೂರು: ಆದಿತ್ಯ- L1 ನಲ್ಲಿರುವ HEL1OS ಸೌರ ಜ್ವಾಲೆಗಳ ಮೊದಲ ಹೈ-ಎನರ್ಜಿ ಎಕ್ಸ್-ರೇ ನೋಟವನ್ನು ಅನ್ನು ಸೆರೆಹಿಡಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ತಿಳಿಸಿದೆ. ರೆಕಾರ್ಡ್ ಮಾಡಲಾದ ಡೇಟಾವು NOAA ನ GOES ನಿಂದ ಒದಗಿಸಲಾದ ಎಕ್ಸ್-ರೇ ಬೆಳಕಿನ ವಕ್ರಾಕೃತಿಗಳೊಂದಿಗೆ ಸ್ಥಿರವಾಗಿದೆ. ಅಕ್ಟೋಬರ್ 27, 2023 ರಂದು ನಿಯೋಜಿಸಲಾಗಿರುವ HEL1OS ಪ್ರಸ್ತುತ ಮಿತಿಗಳು ಮತ್ತು ಮಾಪನಾಂಕ ನಿರ್ಣಯ ಕಾರ್ಯಾಚರಣೆಗಳ ಫೈನ್ ಟ್ಯೂನಿಂಗ್ ಗೆ ಒಳಗಾಗುತ್ತಿದೆ. ವೇಗದ ಸಮಯ ಮತ್ತು ಹೆಚ್ಚಿನ ರೆಸಲ್ಯೂಶನ್ ಸ್ಪೆಕ್ಟ್ರಾದೊಂದಿಗೆ ಸೂರ್ಯನ ಹೆಚ್ಚಿನ […]
ಆದಿತ್ಯ ಎಲ್ 1 ನಿಂದ ಬಂತು ಭೂಮಿ ಮತ್ತು ಚಂದ್ರನ ಮೊದಲ ಚಿತ್ರ!!

ಬೆಂಗಳೂರು: ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಶೋಧಕ ಆದಿತ್ಯ-ಎಲ್1 (Aditya L1) ಲಾಗ್ರೇಂಜ್ ಪಾಯಿಂಟ್ 1 ಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಭೂಮಿ ಮತ್ತು ಚಂದ್ರನ ಚಿತ್ರ ಮತ್ತು ತನ್ನ ಸೆಲ್ಫಿ ತೆಗೆದುಕೊಂಡಿದೆ! ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ (ISRO) ಪ್ರಕಾರ, ಆದಿತ್ಯ-L1 ಆನ್‌ಬೋರ್ಡ್‌ನಲ್ಲಿರುವ ಕ್ಯಾಮೆರಾ ತನ್ನ ಅತಿದೊಡ್ಡ ಪೇಲೋಡ್, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಮತ್ತು SUIT ಉಪಕರಣಗಳ ಹಾಗೂ ಭೂಮಿ ಮತ್ತು ಚಂದ್ರನ ಚಿತ್ರವನ್ನು ಸೆಪ್ಟೆಂಬರ್ 4 ರಂದು ಸೆರೆಹಿಡಿದಿದೆ. Aditya-L1 […]
ಆದಿತ್ಯ ಎಲ್-1 ಮಿಷನ್‌ನ ಹಿಂದಿದ್ದಾರೆ ನಿಗರ್ ಶಾಜಿ ಎಂಬ ಮಹಿಳೆ! ಕೃಷಿಕ ಪರಿವಾರದಿಂದ ಇಸ್ರೋವರೆಗಿನ ಅಮೋಘ ಪಯಣ!!

ಚೆನ್ನೈ: ಆದಿತ್ಯ ಎಲ್-1 ಮಿಷನ್‌ನ ಯಶಸ್ವಿ ಉಡಾವಣೆ ನಂತರ, ತಮಿಳುನಾಡಿನ ದಕ್ಷಿಣ ಜಿಲ್ಲೆಯ ತೆಂಕಾಶಿಯ ಪ್ರತಿಷ್ಠಿತ ಮಹಿಳಾ ವಿಜ್ಞಾನಿ ನಿಗರ್ ಶಾಜಿ ಹೆಸರು ಮುನ್ನೆಲೆಗೆ ಬಂದಿದೆ. ಸೂರ್ಯನನ್ನು ಅಧ್ಯಯನ ಮಾಡಲು ಭಾರತವು ಪ್ರಾರಂಭಿಸಿದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯ ನಿರ್ದೇಶಕಿಯಾಗಿದ್ದಾರೆ ನಿಗರ್ ಶಾಜಿ. ತಮಿಳುನಾಡಿನ ಗ್ರಾಮಾಂತರ ಪ್ರದೇಶವಾದ ಸೆಂಗೊಟ್ಟೈ ಮೂಲದ ನಿಗರ್ ಶಾಜಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 1987 ರಲ್ಲಿ ಇಸ್ರೋ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಇವರು ಈಗ ಬೆಂಗಳೂರನ್ನು ತಮ್ಮ ಮನೆಯಾಗಿಸಿಕೊಂಡಿದ್ದಾರೆ. […]
ಸೂರ್ಯನತ್ತ ಚಿಮ್ಮಿದ ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1: ಶ್ರೀಹರಿಕೋಟಾದಿಂದ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ISRO ಶನಿವಾರ ಶ್ರೀಹರಿಕೋಟಾದಿಂದ ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಆದಿತ್ಯ-ಎಲ್ 1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ ಮತ್ತು ಇಸ್ರೋದ ವಿಶ್ವಾಸಾರ್ಹ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಬಳಸಿ ಬೆಳಿಗ್ಗೆ 11.50 ಕ್ಕೆ ರಾಕೆಟ್ ಅನ್ನು ಹಾರಿಸಲಾಯಿತು. ಬಾಹ್ಯಾಕಾಶ ನೌಕೆಯು ಭೂಮಿಯಿಂದ 125 ದಿನಗಳಲ್ಲಿ ಸುಮಾರು 1.5 ಮಿಲಿಯನ್ ಕಿಮೀ ಪ್ರಯಾಣಿಸಿದ ನಂತರ, ಸೂರ್ಯನಿಗೆ ಹತ್ತಿರವಿರುವ ಲಗ್ರಾಂಜಿಯನ್ ಪಾಯಿಂಟ್ L1 ಸುತ್ತ […]
ಚಂದ್ರ ಆಯ್ತು ಇದೀಗ ಸೂರ್ಯನತ್ತ ISRO ಚಿತ್ತ: ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಆದಿತ್ಯ-ಎಲ್ 1 ಉಡಾವಣೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಮಹತ್ವಾಕಾಂಕ್ಷೆಯ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಿದೆ ಎಂದು ಟ್ವೀಟ್ ಮಾಡಿ ತಿಳಿಸಿದೆ. ಸೆಪ್ಟೆಂಬರ್ 2, ರಂದು 11:50ಕ್ಕೆ ಶ್ರೀಹರಿಕೋಟಾದಿಂದ ಆದಿತ್ಯ-L1 ಅನ್ನು ಉಡಾವಣೆ ಮಾಡಲಾಗುವುದು. https://lvg.shar.gov.in/VSCREGISTRATION/index.jsp ನೋಂದಾಯಿಸುವ ಮೂಲಕ ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಬಿಡುಗಡೆಯನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ನೋಂದಣಿಯ ಪ್ರಾರಂಭವನ್ನು ಪ್ರಕಟಿಸಲಾಗುತ್ತದೆ ಎಂದು ಇಸ್ರೋ ಟ್ವೀಟ್ ತಿಳಿಸಿದೆ. ಆದಿತ್ಯ-L1 ಇದು ಸೂರ್ಯನನ್ನು ಅಧ್ಯಯನ ಮಾಡಲು ಸಹಾಯ […]