ಹಿಮ ರಾಷ್ಟ್ರದಲ್ಲಿ ಆದಿಪುರುಷ್ ಸಿನಿಮಾ ಪ್ರದರ್ಶನ ಬಂದ್ ಕಾರಣ ಸೀತೆ ಭಾರತವಲ್ಲ, ನೇಪಾಳದ ಮಗಳು

ಕಠ್ಮಂಡು(ನೇಪಾಳ):ಸೀತೆಯನ್ನು ಭಾರತದ ಮಗಳೆಂದು ಬಿಂಬಿಸಲಾಗಿದೆ. ಜಾನಕಿ ಜನಿಸಿದ್ದು ನೇಪಾಳದ ಜನಕಪುರದಲ್ಲಿ. ಈ ಬಗ್ಗೆ ಸುಳ್ಳು ಹೇಳಿದ್ದಕ್ಕೆ ದೇಶದಲ್ಲಿ ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ. ಸಂಭಾಷಣೆ ಮತ್ತು ಚಿತ್ರಕಥೆ ಕಾರಣಕ್ಕಾಗಿ ತೀವ್ರ ವಿವಾದಕ್ಕೀಡಾಗಿರುವ ತೆಲುಗು ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಪ್ರದರ್ಶನಕ್ಕೆ ನೇಪಾಳದಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ.ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಆದಿಪುರುಷ್ ಸಿನಿಮಾ ಒಂದಲ್ಲೊಂದು ಕಾರಣಕ್ಕೆ ವಿವಾದಕ್ಕೆ ಸಿಲುಕುತ್ತಿದೆ. ಪ್ರಸಿದ್ಧ ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿ ಆದಿಪುರುಷ ಸಿನಿಮಾದಲ್ಲಿ ಸೀತೆಯ ಮೂಲದ ಬಗ್ಗೆ ಸುಳ್ಳು ಹೇಳಲಾಗಿದೆ. […]