ಉಡುಪಿ: ಈಶಪ್ರಿಯ ಶ್ರೀಗಳ ಸಂಭ್ರಮದ ಪುರಪ್ರವೇಶ

ಉಡುಪಿ: ಉಡುಪಿ ಶ್ರೀಕೃಷ್ಣನ ಮಠದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಪರ್ಯಾಯ ಪೀಠರೋಹಣ ಮಾಡಲಿರುವ ಅದಮಾರು ಮಠದ ಶ್ರೀ ಈಶಪ್ರೀಯ ಸ್ವಾಮೀಜಿ ಅವರ ಪುರಪ್ರವೇಶ ಗುರುವಾರ ನಡೆಯಿತು‌.‌ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದ ವರೆಗೆ ಪುರ ಪ್ರವೇಶದ ಮೆರವಣಿಗೆ ಸಾಗಿ ಬಂತು. ಈಶಪ್ರಿಯ ಶ್ರೀಗಳು ಕಾಲ್ನಡಿಗೆಯಲ್ಲೇ ಆಗಮಿಸಿದರು‌. ಅದಮಾರು ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಿಯ ತೀರ್ಥರು ಆಶೀರ್ವಾದಿಸಿದರು‌. ಮೆರವಣಿಗೆಯಲ್ಲಿ ವಿಶೇಷ ಹುಲಿಕುಣಿತ, ಯಕ್ಷಗಾನ, ಬೇರೆ ಬೇರೆ ಭಾಗದ ಹತ್ತಾರು ಕಲಾ ತಂಡಗಳು, ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದು, ಮೆರವಣಿಗೆಯ ಮೆರುಗು […]