ಅಚ್ಲಾಡಿ ಸನ್‌ಶೈನ್ ಗೆಳೆಯರ ಬಳಗ ದಶಮಾನೋತ್ಸವ: ಸಾಧಕರಿಗೆ ಸಮ್ಮಾನ

ಕುಂದಾಪುರ: ಸನ್‌ಶೈನ್ ಗೆಳೆಯರ ಬಳಗ ರಿ. ಕ್ರೀಡಾಸಂಘ ಅಚ್ಲಾಡಿ ಇದರ ದಶಮಾನೋತ್ಸವ ಸಮಾರಂಭ ಭಾನುವಾರ ಅಚ್ಲಾಡಿ ಸನ್‌ಶೈನ್ ಕ್ರೀಡಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸನ್‌ಶೈನ್ ಗೆಳೆಯರ ಬಳಗವನ್ನು ನಾನು ಬಹಳ ಹತ್ತಿರದಿಂದ ಕಂಡವನು. ಇಲ್ಲಿ ಒಂದಷ್ಟು ಯುವ ಮನಸ್ಸುಗಳು ಒಟ್ಟಿಗೆ ಸೇರಿ ಜನಪರ, ಬಡವರ ಪರ ಕಾರ್ಯಕ್ರಮವನ್ನು ಸಂಘಟಿಸಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಹಾಗೂ ಸಂಘಟನೆಗಳು ಸದಾ ಕ್ರೀಯಾಶೀಲವಾಗಿದ್ದಾಗ ಊರಿನ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು. ಸಂಸ್ಥೆಯ […]