ಧರ್ಮಸ್ಥಳ : ಕಾರು ಹಾಗೂ ಜೀಪ್ ಮಧ್ಯೆ ಅಪಘಾತ; ನಾಲ್ವರಿಗೆ ಗಂಭೀರ ಗಾಯ

ಧರ್ಮಸ್ಥಳ: ಕಾರು ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಹೋಗುತ್ತಿದ್ದ ಜೀಪ್ ಹಾಗೂ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಬಿಳಿನೆಲೆ ಸೇತುವೆಯ ಸಮೀಪ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಜೀಪಿ‌ನಲ್ಲಿದ್ದ ಇಬ್ಬರು ಹಾಗೂ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹಿರಿಯಡಕ: ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ; ಯುವಕ ಸ್ಥಳದಲ್ಲೇ ಸಾವು 

ಹಿರಿಯಡಕ: ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಇಂದು ಮಧ್ಯಾಹ್ನ ನಡೆದಿದೆ. ಮೃತ ಯುವಕನನ್ನು ಹಿರಿಯಡಕ ಸಮೀಪದ ಪುತ್ತಿಗೆ ನಿವಾಸಿ 18ವರ್ಷ ಪ್ರಾಯ ಸ್ಟ್ಯಾಲಿನ್ ಎಂದು ಗುರುತಿಸಲಾಗಿದೆ. ಈತ ಇಂದು ಮಧ್ಯಾಹ್ನ ಹಿರಿಯಡಕ ಪೇಟೆಯಿಂದ ಪುತ್ತಿಗೆ ಕಡೆಗೆ ಹೋಗುತ್ತಿದ್ದನು. ಈ ವೇಳೆ ಎದುರಿನಿಂದ ಬಂದ ಸ್ಕೋಡಾ ಕಾರೊಂದು ಡಿಕ್ಕಿಯಾಗಿದೆ. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಸ್ಟ್ಯಾಲಿನ್ ತಲೆಗೆ ಗಂಭೀರ […]

ಮಂಗಳೂರು: ಸ್ಕೂಟರ್ ಗೆ ಬಸ್ ಡಿಕ್ಕಿ; ಬಾಲಕ ಸಾವು

ಮಂಗಳೂರು: ಇಲ್ಲಿನ ಲಾಲ್ ಬಾಗ್ ಸಿಗ್ನಲ್ ಬಳಿಯಲ್ಲಿ ಖಾಸಗಿ ಬಸ್ಸೊಂದು ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬನ ಮರಣ ಸಂಭವಿಸಿದೆ. ನೀರುಮಾರ್ಗದ ಧನು(13) ಎಂಬ ಬಾಲಕ ಮೃತಪಟ್ಟ ದುರ್ದೈವಿ. ತನ್ನ ಸಂಬಂಧಿ ಜೊತೆ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದದ್ದರಿಂದ ಸ್ಕೂಟರ್ ಚಲಾಯಿಸುತ್ತಿದ್ದ ಸಂಬಂಧಿ ಎಡಗಡೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಧನು ಬಲಗಡೆಗೆ ಬಿದ್ದಿದ್ದು, ಆತನ ಮೇಲೆ ಬಸ್ ನ ಚಕ್ರ ಹಾದು ಹೋಗಿದೆ. ಇದರಿಂದಾಗಿ […]

ಹಾಸನ ಭೀಕರ ಅಪಘಾತದಲ್ಲಿ ಮೃತರಾದ ಕುಟುಂಬದವರಿಗೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಹಾಸನ: ಜಿಲ್ಲೆಯ ಅರಸೀಕೆರೆ ಬಳಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಒಂಬತ್ತು ಜನರ ಕುಟುಂಬಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕೆಆರ್‌ಪೇಟೆ ತಾಲೂಕಿನ ಅಂಬಿಗ್ರಾಮ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ. ಬಾಣಾವರ ಪೊಲೀಸ್ ವ್ಯಾಪ್ತಿಯ ಚಲುವನಹಳ್ಳಿ ಬಳಿ ಸರ್ಕಾರಿ ಬಸ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ […]

ಉಚ್ಚಿಲ: ಸ್ಕಾರ್ಪಿಯೋ ಚಾಲಕನ ಅವಾಂತರದಿಂದ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಪಡುಬಿದ್ರೆ: ಉಚ್ಚಿಲದಲ್ಲಿ ಸ್ಕಾರ್ಪಿಯೋ ಚಾಲಕನ ಅವಾಂತರದಿಂದಾಗಿ ನಾಲ್ಕು ವಾಹನಗಳು ಸರಣಿ ಅಪಘಾತಕ್ಕೆ ತುತ್ತಾಗಿವೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಎದುರು ಈ ಘಟನೆ ಸಂಭವಿಸಿದೆ. ಸ್ಕಾರ್ಪಿಯೋ ಚಾಲಕ ಅತೀವೇಗ ಹಾಗೂ ನಿರ್ಲಕ್ಷ ತನದಿಂದ ವಾಹನ ಚಲಾಯಿಸುತ್ತಾ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದು, ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಬಳಿಕ ವಾಹನವನ್ನು ಅಲ್ಲಿ ನಿಲ್ಲಿಸದೆ ಅತಿವೇಗದಿಂದ ಮುಂದೆ ಸಾಗಿ ಅಲ್ಲಿ ಮತ್ತೆ ಎರ್ಟಿಗಾ ಕಾರು, ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ […]