ಕಲ್ಸಂಕ ರಸ್ತೆಯಲ್ಲಿ ಸ್ಕೂಟರ್ ಗೆ ಕಾರು ಢಿಕ್ಕಿ ವ್ಯಕ್ತಿ ಸಾವು

ಉಡುಪಿ, : ಸ್ಕೂಟರಿಗೆ ಕಾರೊಂದು ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಅಂಬಾಗಿಲಿನಿಂದ ಕಲ್ಸಂಕಕ್ಕೆ ಹೋಗುವ ರಸ್ತೆಯಲ್ಲಿ ದುರ್ಗಾ ಜನರಲ್ ಸ್ಟೋರ್ ಎದುರು ನಡೆದಿದೆ. ಮೃತರನ್ನು ಪುತ್ತೂರು ಗ್ರಾಮದ ಹನುಮಂತನಗರದ ನಿವಾಸಿ ರವಿಚಂದ್ರ ದೇವಾಡಿಗ (57) ಎಂದು ಗುರುತಿಸಲಾಗಿದೆ. ಇವರು ದುರ್ಗಾ ಜನರಲ್‌ ಸ್ಟೋರ್‌ ಎದುರು ತನ್ನ ಸ್ಕೂಟರ್‌ ನಲ್ಲಿ ಡಿವೈಡರ್‌ ಬಳಿ ಸೂಚನೆ ನೀಡಿ ತಿರುಗಿಸುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಸ್ಕೂಟರ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಇದರಿಂದ ಸ್ಕೂಟರ್‌ ಸಮೇತ ರಸ್ತೆಗೆ […]