ಶಂಕರಪುರ: ಸ್ಕೂಟರ್‌ಗೆ ಟೆಂಪೋ ಢಿಕ್ಕಿ; ಮಹಿಳೆಗೆ ಗಾಯ..!!

ಶಿರ್ವ: ಇಲ್ಲಿನ ಕುರ್ಕಾಲು ಗ್ರಾಮದ ಶಂಕರಪುರ ಪೇಟೆಯಲ್ಲಿ ಶಂಕರಪುರದಿಂದ ಉಡುಪಿ ಕಡೆ ಹೋಗುತ್ತಿದ್ದ ಸ್ಕೂಟರ್‌ಗೆ ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಟೆಂಪೋ ಢಿಕ್ಕಿ ಹೊಡೆದು ಮಹಿಳೆ ರತ್ನಾ (45) ಅವರು ಗಾಯಗೊಂಡಿದ್ದಾರೆ. ಢಿಕ್ಕಿ ಹೊಡೆದ ಟೆಂಪೋ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಾಳುವನ್ನು ಉಪಚರಿಸಿದ್ದು, ಗಾಯಾಳು ಮಹಿಳೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.