ಮರಳಿ ಗೂಡು ಸೇರಲಿದೆ ಆರ್‌ಸಿಬಿ ಹಕ್ಕಿ: 2023 ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುತ್ತೇನೆಂದ ಎಬಿ ಡಿವಿಲಿಯರ್ಸ್!

ಬೆಂಗಳೂರು: ಮಿಸ್ಟರ್ 360 ಡಿಗ್ರಿ ಎಂದು ಪರಿಗಣಿಸಲಾಗುವ, ಕ್ರಿಕೆಟ್ ಜಗತ್ತಿನ ಬಹು ಬೇಡಿಕೆಯ ಆಟಗಾರ, ಆರ್‌ಸಿಬಿಯ ಹಕ್ಕಿ ಎಬಿ ಡಿವಿಲಿಯರ್ಸ್ ಮರಳಿ ಗೂಡು ಸೇರಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಕೆಲವು ತಿಂಗಳ ನಂತರ, ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವುದಾಗಿ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ ಮುಂದಿನ ವರ್ಷ ಐಪಿಎಲ್‌ಗೆ “ಖಂಡಿತವಾಗಿ” ಮರಳಲಿದ್ದೇನೆ ಎಂದು ಅವರು ಹೇಳಿದ್ದಾರೆ. “ವಿರಾಟ್ ಅದನ್ನು ಖಚಿತಪಡಿಸಿದ್ದು ಕೇಳಿ ನನಗೆ ಖುಷಿಯಾಗಿದೆ. ನಿಜ ಹೇಳಬೇಕೆಂದರೆ, […]