ಎ.10ರಂದು 16 ವರ್ಷದೊಳಗಿನ ಮಕ್ಕಳಿಗೆ ಮುನಿಯಾಲು ಸ್ವರ್ಣಪ್ರಾಶನ ಲಸಿಕೆ

ಮಣಿಪಾಲ: ಮಕ್ಕಳ ಸ್ವಾಸ್ಥ್ಯರಕ್ಷಣೆ ಹಾಗೂ ವ್ಯಾಧಿಕ್ಷಮತೆಯ ಅಭಿವೃದ್ಧಿಗಾಗಿ ಮುನಿಯಾಲು ಆಯುರ್ವೇದ ಸಂಶೋಧನಾ ಸಂಸ್ಥೆಯಿಂದ ವಿಶೇಷವಾಗಿ ಸಂಶೋಧಿಸಲ್ಪಟ್ಟ ಹಿರಣ್ಯಪ್ರಾಶದ ಬಿಂದುಗಳನ್ನು 16 ವರ್ಷಗಳೊಳಗಿನ ಮಕ್ಕಳಿಗೆ ಈ ತಿಂಗಳ ಪುಷ್ಯ ನಕ್ಷತ್ರವಾದ ಏಪ್ರಿಲ್ 10, 2022ರಂದು ನೀಡಲಾಗುತ್ತಿದೆ. ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗುತ್ತಿದ್ದು, ಹೆಚ್ಚು ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಮುಖ್ಯ ರಸ್ತೆಯ […]