ಉಡುಪಿಯಲ್ಲಿ ಇಂದು, ನಾಳೆ ಬಿಗ್ ಲಾಕ್‌ಡೌನ್, ನಿಯಮ ಉಲ್ಲಂಘಿಸಿದ್ರೆ ಕಾದಿದೆ ಶಿಕ್ಷೆ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ :  ಉಡುಪಿ ಜಿಲ್ಲೆಯಲ್ಲಿ  ಮೇ 23 ಶನಿವಾರ  ರಾತ್ರಿ 7 ಗಂಟೆಯಿoದ  ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ  ಜಾರಿಗೊಳಿಸುತ್ತಿದ್ದು,  ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ  ತಿರುಗಾಡುವವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ 36 ಗಂಟೆಗಳ ಲಾಕ್ ಡೌನ್ ಅವಧಿಯಲ್ಲಿ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ,  ಔಷಧ ಅಂಗಡಿಗಳು ಮತ್ತು  […]