ಕ್ಯಾಟ್‌: ಉಡುಪಿಯ ‘ನಿರಂಜನ ಪ್ರಸಾದ್‌’ ರಾಷ್ಟ್ರಮಟ್ಟದ ಸಾಧನೆ

ಉಡುಪಿ: ಈ ಸಾಲಿನ ‘ಕ್ಯಾಟ್’ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಮಣಿಪಾಲದ ನಿರಂಜನ ಪ್ರಸಾದ್‌ ಶೇ 100 ಫಲಿತಾಂಶ ಪಡೆದು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಕ್ಯಾಟ್‌ ಪರೀಕ್ಷೆ ಬರೆದ 2.9 ಲಕ್ಷ ವಿದ್ಯಾರ್ಥಿಗಳ ಪೈಕಿ ದೇಶದ ಅತ್ಯುನ್ನತ ಅಂಕಗಳನ್ನು ಪಡೆದ 11 ಮಂದಿಯಲ್ಲಿ ಓರ್ವರಾಗಿದ್ದಾರೆ. ನಿರಂಜನ್ ಪ್ರಸಾದ್‌  ಕರ್ನಾಟಕದಿಂದ ಈ ಸಾಧನೆ ಮಾಡಿದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.