ಐಟಿ ವಲಯದ ಬೃಹತ್ ಕಂಪನಿಯ 19,000 ಉದ್ಯೋಗಿಗಳ ವಜಾ

ವಾಷಿಂಗ್ಟನ್: ಐಟಿ ವಲಯದ ದೈತ್ಯ ಆಕ್ಸೆಂಚರ್ ಕಂಪನಿಯು ಜಾಗತಿಕ ಆರ್ಥಿಕ ಹಿಂಜರಿಕೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ 19,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ. ಆಕ್ಸೆಂಜರ್ ಕಂಪನಿಯು ಐರ್ಲೆಂಡ್ ಮೂಲದ ಐಟಿ ವಲಯದ ಬೃಹತ್ ಕಂಪನಿಯಾಗಿದ್ದು ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಕಾರಣ ತನ್ನ ವಾರ್ಷಿಕ ಆದಾಯದ ಬೆಳವಣಿಗೆ ಮತ್ತು ಲಾಭದ ಮಿತಿಯನ್ನು ಇಳಿಕೆ ಮಾಡಿರುವುದರಿಂದ ಸುಮಾರು 19,000 ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಕಂಪನಿಯ ವಾರ್ಷಿಕ ಆದಾಯ ಶೇ.10 ರಿಂದ ಶೇ.8ಕ್ಕೆ ಇಳಿಕೆ ಮಾಡಿದ್ದು 1989 ರಲ್ಲಿ ಸ್ಥಾಪನೆಯಾಗಿರುವ ಈ ಕಂಪನಿಯು […]