ಉಡುಪಿ: ಕರಾವಳಿ ಕಾವಲು ಪೊಲೀಸ್ ಕರ್ನಾಟಕ, ಕೇಂದ್ರ ಕಛೇರಿ ಮಲ್ಪೆಯಲ್ಲಿ ಬುಧವಾರದಂದು ಅಬ್ದುಲ್ ಅಹದ್, ಐಪಿಎಸ್ ಇವರ ಉಪಸ್ಥಿತಿಯಲ್ಲಿ ಮರ್ಚೆಂಟ್ ನೇವಿಯ ನಿವೃತ್ತ ಅಧಿಕಾರಿಗಳು ಮತ್ತು ಭಾರತೀಯ ನೌಕಾಸೇನೆ, ಭಾರತೀಯ ತಟರಕ್ಷಣ ಪಡೆಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಕರಾವಳಿಯ ರಾಷ್ಟ್ರೀಯ ಭದ್ರತೆಯ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು.
ಡಾಲ್ಸಿ ಪಿಂಟೋ ಉಪಪ್ರಾಂಶುಪಾಲರು, ಮಂಗಳೂರು ಮರೈನ್ ಕಾಲೇಜು ಹಾಗೂ ಇತರೇ ನಿವೃತ್ತ ಹಾಗೂ ಸೇವಾನಿರತ ನೌಕಾಧಿಕಾರಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಅವರ ಬೇರೆ ಬೇರೆ ದೇಶಗಳ ಪ್ರಯಾಣದ ವೇಳೆ ಆದ ಅವರ ಅನುಭವಗಳನ್ನು ಹಾಗೂ ರಾಷ್ಟ್ರೀಯ ಭದ್ರತೆಯ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡರು.
ಸಭೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ 9 ಠಾಣೆಗಳ ಪೊಲೀಸ್ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರುಗಳು ಭಾಗವಹಿಸಿದ್ದರು.