ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ತಿನ್ನುವ ಖುಷಿಯೇ ಬೇರೆ. ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಸ್ವೀಟ್ ಕಾರ್ನ್ ಇಷ್ಟವಾಗುತ್ತದೆ. ಮಕ್ಕಳಿಗಳಂತೂ ಸ್ವೀಟ್ ಕಾರ್ನ್ ಎಂದರೆ ಫೆವರೇಟ್ ಬಿಡಿ. ಪೇಟೆಯಲ್ಲಿ ಯಾವುದ್ಯಾವುದೋ ಗಾಡಿಯ ತಿಂಡಿಗಳನ್ನು ತಿನ್ನುವುದಕ್ಕಿಂತಲೂ ಅಂತದ್ದೇ ಗಾಡಿಗಳಲ್ಲಿ ದೊರಕುವ ಸ್ವೀಟ್ ಕಾರ್ನ್ ತಿನ್ನುವುದು ಹೆಚ್ಚು ಸೂಕ್ತ. ಯಾಕೆಂದರೆ ಸ್ವೀಟ್ ಕಾರ್ನ್ ನಲ್ಲಿ ಕೆಲವೊಂದು ಆರೋಗ್ಯ ಲಾಭಗಳಿವೆ. ಆದರೆ ಮನೆಯಲ್ಲಿಯೇ ಸ್ವೀಟ್ ಕಾರ್ನ್ ಬೇಯಿಸಿ ತಿಂದರೆ ಇನ್ನೂ ಬೆಸ್ಟ್.ಸ್ವೀಟ್ ಕಾರ್ನ್ ನಿಂದ ಏನೆನೆಲ್ಲಾ ಲಾಭಗಳಿವೆ ಎಂದು ಇಲ್ಲಿ ಮಾಹಿತಿ ನೀಡಿದ್ದೇವೆ
ಅಂಥದ್ದೇನಿದೆ ಸ್ವೀಟ್ ಕಾರ್ನ್ ನಲ್ಲಿ?
♦ಎನಿಮಿಯಾ ಅಥವಾ ರಕ್ತದ ಕೊರತೆಯನ್ನು ಕಡಿಮೆ ಮಾಡುವುದರಲ್ಲಿ ಸಹಕರಿಸುತ್ತದೆ
♦ದೇಹದಲ್ಲಿನ ಬೊಜ್ಜು ಕರಗಿಸುವಲ್ಲಿ, ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನ ಪ್ರಮಾಣ ಕಡಿಮೆ ಮಾಡುವುದರಲ್ಲಿ ಕಾರ್ನ್ ಸಹಕರಿಸುತ್ತದೆ.
♦ಸ್ವೀಟ್ ಕಾರ್ನ್ನಲ್ಲಿರುವ ವಿಟಮಿನ್ ಬಿ12 ಮತ್ತು ಕಬ್ಬಿಣಾಂಶ ದೇಹದಲ್ಲಿನ ರಕ್ತದ ಕೊರತೆ ಕಡಿಮೆಯಾಗುತ್ತದೆ.
♦ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಕಾರ್ನ್ ಸಹಕಾರಿ. ಡಯಟ್ ಮಾಡುವವರು ಇದನ್ನು ತಿನ್ನುವುದರಿಂದ ಫಿಟ್ ಆಗಿರಬಹುದು.
♦ದೇಹದ ತೂಕ ಕಡಿಮೆ ಮಾಡಲು ಬಯಸುವವರು ವಾರಕ್ಕೆ 2 ರಿಂದ 3 ಬಾರಿ ಸ್ವೀಟ್ ಕಾರ್ನ್ ತಿಂದರೆ ಬೆಸ್ಟ್.ಡಯಟ್ ಮಾಡುವವರು ಒಂದು ಪಾತ್ರೆಗೆ ಜೀರಿಗೆ, ಕಡಲೆಕಾಯಿ ಹಾಕಿ ಹುರಿದು, ನಂತರ ಇದಕ್ಕೆ ಬೇಯಿಸಿದ ಕಾರ್ನ್ ಅನ್ನು ಸೇರಿಸಿ. ಬಳಿಕ ಸಣ್ಣಗೆ ತುರಿದ ಸೌತೇಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಟೊಮೇಟೋ ನಿಂಬೆರಸ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಹುರಿದು ತಿನ್ನಿ.
♦ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ವಾರಕ್ಕೆ ನಾಲ್ಕು ಬಾರಿ ಕಾರ್ನ್ ಬೇಯಿಸಿ ಅದಕ್ಕೆ ತುಪ್ಪ ಹಾಕಿಕೊಂಡು ತಿನ್ನುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
♦ಕಾರ್ನ್ ಗೆ ಹಾಕುವ ಉಪ್ಪು, ಖಾರ ಮತ್ತು ಬೆಣ್ಣೆ ಬಳಸುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು. ಹಾಗೇ ಕಾರ್ನ್ ಅನ್ನು ಸುಟ್ಟು ಕೂಡ ತಿನ್ನಬಹುದು.