ಉಡುಪಿ: ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ಅನೇಕ ಬಾರಿ ಕೇಳಿದ್ದೇವೆ, ನೋಡಿದ್ದೇವೆ.
ಇದೀಗ ಆ ಸರದಿಗೆ ತೆಂಗಿನ ಸೋಗೆ ಹೆಣೆಯುವ ಪ್ರತಿಭೆಯೂ ಸೇರ್ಪಡೆಯಾಗಿದೆ. ಹೌದು, ಕೃಷಿ ಕುಟುಂಬದಿಂದ ಬಂದ ಶ್ರೀಗಳು ಸನ್ಯಾಸ ಸ್ವೀಕಾರದವರೆಗೂ ಆ ತುಂಬು ಸಂಪ್ರದಾಯಸ್ಥ ಮನೆಯ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡವರು.
ಆ ಬಳಿಕವೂ ಸಂದರ್ಭ ಸಿಕ್ಕಾಗೆಲ್ಲ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಯಾವುದೇ ಬಿಗುಮಾನಗಳಿಲ್ಲದೆ ತೊಡಗಿಸಿಕೊಂಡದ್ದನ್ನು ಕಾಣುತ್ತಿರುತ್ತೇವೆ.
ಮಂಗಳವಾರದಂದು ಉಡುಪಿಯ ಮಠದಲ್ಲಿ ಯಾವುದೋ ಕೆಲಸಕ್ಕೆ ಅಗತ್ಯವಿದ್ದ ತೆಂಗಿನ ಸೋಗೆಯನ್ನೂ ತಾವೇ ಸ್ವತಃ ತುಂಬ ಅಚ್ಚುಕಟ್ಡಾಗಿ ಹೆಣೆದು ಗಮನಸೆಳೆದಿದ್ದಾರೆ.