ವಾಟ್ರಿ, ಫ್ರಾನ್ಸ್: ವಿಮಾನದಲ್ಲಿ ಸುಮಾರು 300 ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದರು. ಯುಎಇಯಿಂದ ಹೊರಟಿದ್ದ ವಿಮಾನ ರೊಮಾನಿಯಾದ ಕಂಪನಿ ಲೆಜೆಂಡ್ ಏರ್ಲೈನ್ಸ್ಗೆ ಸೇರಿದ ಎ340 ವಿಮಾನವನ್ನು ಖಚಿತ ಮಾಹಿತಿ ಆಧರಿಸಿ ವಾಟ್ರಿ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ. ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಶುಕ್ರವಾರ ಮಾನವ ಕಳ್ಳಸಾಗಾಣೆ ಶಂಕೆ ಮೇರೆಗೆ ತುರ್ತು ಭೂಸ್ಪರ್ಶ ಮಾಡಲಾಗಿದೆ.
ವಿಮಾನದಲ್ಲಿ 303 ಮಂದಿ ಭಾರತೀಯ ಪ್ರಜೆಗಳಿದ್ದಾರೆ. ಬಹುಶಃ ಇವರು ಯುಎಇಯಲ್ಲಿ ಕೆಲಸ ಮಾಡುತ್ತಿದ್ದಿರಬೇಕು. ಇವರನ್ನು ಅಮೆರಿಕ ಅಥವಾ ಕೆನಡಾಗೆ ಅಕ್ರಮವಾಗಿ ಪ್ರವೇಶಿಸುವ ಯತ್ನವಾಗಿ ತೆರಳುತ್ತಿದ್ದರು ಎಂದು ಶಂಕಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆವಿಮಾನದಲ್ಲಿ ಇದ್ದವರು ಮಾನವ ಕಳ್ಳಸಾಗಣೆಗೆ ಒಳಗಾಗಿರುವ ಶಂಕೆ ಇದೆ ಎಂದು ಪ್ಯಾರಿಸ್ನ ಅಧಿಕಾರಿಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಸಂಘಟಿತ ಅಪರಾಧ ನಿಗ್ರಹ ಘಟಕ ಜುನಾಲ್ಕೊ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ