ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ ಇಂಗ್ಲೆಡ್ 215 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತವು ಮೊದಲ ಐದು ಓವರ್‌ಗಳಲ್ಲಿ ರಿಷಬ್ ಪಂತ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್‌ಗಳನ್ನು ಕಳೆದುಕೊಂಡು 31-3ಕ್ಕೆ ಇಳಿದಾಗ, ತನ್ನ ಬ್ಯಾಂಟಿಂಗ್ ಕೌಶಲ್ಯವನ್ನು ಒರೆಗೆ ಹಚ್ಚಿದ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನು ಮತ್ತೆ ಹಳಿಗೆ ತಂದರು. ಭಾರತವು ಪಂದ್ಯವನ್ನು ಸೋತಿದ್ದರೂ ಕೂಡಾ ಸೂರ್ಯಕುಮಾರ್ ಶತಕದ ಬಗ್ಗೆ ಇಡೀ ದೇಶವೆ ಸಂತೋಷ ವ್ಯಕ್ತಪಡಿಸುತ್ತಿದೆ.
ಸೂರ್ಯಕುಮಾರ್ ಯಾದವ್ 48 ಎಸೆತಗಳಲ್ಲಿ ಅಮೋಘ ಶತಕ ಗಳಿಸಿ, ಲಘು ಅವಧಿಯ ಕ್ರಿಕೆಟ್ ಮ್ಯಾಚ್ ಗಳಲ್ಲಿ ಮೂರಂಕಿ ಸಂಖ್ಯೆಯನ್ನು ದಾಟಿದ ಐದನೇ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಯಾದವ್ 117 ರನ್ ಗಳಿಸಿದರು. ಟಿ20 ಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನೀಗ ಯಾದವ್ ಹೊಂದಿದ್ದಾರೆ.
ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ 46 ಎಸೆತಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ ಬಳಿಕ ಯಾದವ್ 100 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. 2016 ರಲ್ಲಿ ಲಾಡರ್‌ಹಿಲ್‌ನಲ್ಲಿ ರಾಹುಲ್ ಅವರ ವೆಸ್ಟ್ ಇಂಡೀಸ್ ವಿರುದ್ಧ 110 ರನ್ ಗಳನ್ನು ಹಿಂದಿಕ್ಕಿದ ಯಾದವ್ ರ 117 (55) ಸ್ಕೋರ್ ಭಾರತದ ಹೊರಗಿನ ಟಿ20ನಲ್ಲಿ ಭಾರತೀಯ ಬ್ಯಾಟರ್‌ನಿಂದ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ.
ಇಲ್ಲಿಯವರೆಗೆ ಟಿ20ಐ ಗಳಲ್ಲಿ ಶತಕ ಗಳಿಸಿದ ಭಾರತೀಯ ಆಟಗಾರರು:
ಸುರೇಶ್ ರೈನಾ – 101 ದಕ್ಷಿಣ ಆಫ್ರಿಕಾ (ಗ್ರಾಸ್ ಐಲೆಟ್, 2010)
ರೋಹಿತ್ ಶರ್ಮಾ- 106 ದಕ್ಷಿಣ ಆಫ್ರಿಕಾ (ಧರ್ಮಶಾಲಾ, 2015)
ಕೆಎಲ್ ರಾಹುಲ್- 110 ವೆಸ್ಟ್ ಇಂಡೀಸ್ (ಲಾಡರ್‌ಹಿಲ್, 2016)
ರೋಹಿತ್ ಶರ್ಮಾ- 118 ಶ್ರೀಲಂಕಾ (ಇಂಧೋರ್, 2017)
ಕೆಎಲ್ ರಾಹುಲ್- 101 ಇಂಗ್ಲೆಂಡ್ (ಮ್ಯಾಂಚೆಸ್ಟರ್, 2018)
ರೋಹಿತ್ ಶರ್ಮಾ- 100 ಇಂಗ್ಲೆಂಡ್ (ಬ್ರಿಸ್ಟಲ್, 2018)
ರೋಹಿತ್ ಶರ್ಮಾ- 111 ವೆಸ್ಟ್ ಇಂಡೀಸ್ (ಲಕ್ನೋ, 2018)
ದೀಪಕ್ ಹೂಡಾ- 104 ಐರ್ಲೆಂಡ್ (ಮಲಾಹಿಡೆ, 2022)
ಸೂರ್ಯಕುಮಾರ್ ಯಾದವ್- 117 ಇಂಗ್ಲೆಂಡ್ (ಟ್ರೆಂಟ್ ಬ್ರಿಡ್ಜ್, 2022)