ಸುರತ್ಕಲ್: ಇಲ್ಲಿನ ಟೋಲ್ ಅಕ್ರಮ ವಿರೋಧಿಸಿ ಆಪತ್ಭಾಂದವ ಆಸೀಫ್ ಅವರು ಕಳೆದ ಹತ್ತು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಉಡುಪಿ ಘಟಕ ವತಿಯಿಂದ ನೈತಿಕ ಬೆಂಬಲ ನೀಡಿದೆ.
ಕರವೇ ಉಡುಪಿ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಇಂದು ತೆರಳಿ ನೈತಿಕ ಬೆಂಬಲ ಸೂಚಿಸಿದರು. ಇದೇ ವೇಳೆ ಮುಂದಿನ ಹೋರಾಟದಲ್ಲಿ ಕರವೇ ಕಾರ್ಯಕರ್ತರು ಕೂಡ ಭಾಗಿಯಾಗಲಿದ್ದಾರೆಂದು ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಫ್ರ್ಯಾಂಕಿ ಡಿ ಸೋಜ ಕೊಳಲಗಿರಿ, ಜಿಲ್ಲಾ ಕಾರ್ಮಿಕ ಘಟಕದ ಅಧಕ್ಷ ದೇವರಾಜ್ ಎಂ. ಬಿ, ಕಾರ್ಮಿಕ ಘಟಕದ ಸಿದ್ದಣ್ಣ ಎಸ್ ಪೂಜಾರಿ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತ ಪ್ರಿಯ, ಜಿಲ್ಲಾ ಮಹಿಳೆ ಘಟಕದ ಸಲಹೆಗಾರರಾದ ಸುನಂದಾ, ಬ್ರಹ್ಮಾವರ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ, ಜಿಲ್ಲಾ ಮಹಿಳಾ ಘಟಕದ ಸಹ ಕಾರ್ಯದರ್ಶಿ ಅನುಷಾ, ಸದಸ್ಯರಾದ ಪ್ರಭಾಕರ ಪೂಜಾರಿ, ಪ್ರೀತಮ್, ಗೀತಾ ಪಾಂಗಾಳ, ನಿರ್ಮಲಾ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.