ಮಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಕಾಲಮಿತಿಯಲ್ಲಿ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಯುಟಿ ಖಾದರ್ ಪ್ರತಿಕ್ರಯಿಸಿದ್ದು, ಡಿಫೆಕ್ಷನ್ ಆಕ್ಟ್ ಕೇವಲ ರಾಜ್ಯಕ್ಕೆ ಅಲ್ಲ, ದೇಶಕ್ಕೆ ಸಂದೇಶ ಸಾರಿದೆ. ಸುಪ್ರೀಂ ಕೋರ್ಟ್ ನ ತೀರ್ಮಾನ ಮಹತ್ವವಾದದ್ದು. ಸ್ಪೀಕರ್ ಗೆ ಕೊಟ್ಟ ಹಕ್ಕನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸುತ್ತಾರೆ ಎಂದ ಅವ್ರು ಅತೃಪ್ತ ಶಾಸಕರ ಅನರ್ಹತೆ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಇನ್ನೂ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಪಕ್ಷದ ಮುಖ್ಯ ಸಚೇತಕರ ಬಳಿ ವಿಪ್ ಪವರ್ ಇರುತ್ತದೆ. ವಿಪ್ ಜಾರಿಯ ಕುರಿತು ಪಕ್ಷದ ಮುಖ್ಯಸ್ಥರು ತೀರ್ಮಾನಿಸುತ್ತಾರೆ. ವಿಪ್ ಹಾಗೂ ಸ್ಪೀಕರ್ ಗೆ ಸಂಬಂಧವಿಲ್ಲ. ವಿಪ್ ಕುರಿತು ಆಯಾಯ ಪಕ್ಷಗಳು ನಿರ್ಧರಿಸುತ್ತದೆ. ವಿಶ್ವಾಸಮತದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಸಚಿವ ಯುಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.