ಮೇಷ ರಾಶಿಯಲ್ಲಿ ಸೂರ್ಯ ಸಂಚಾರ: ಹೀಗಿರಲಿದೆ ವೃಷಭ ರಾಶಿಯವರ ಫಲಾಫಲಗಳು..

ವೃಷಭ ರಾಶಿಯ ಸ್ಥಳೀಯರಿಗೆ, ಸೂರ್ಯನು ನಾಲ್ಕನೇ ಮನೆಯ ಅಧಿಪತಿಯಾಗಿದ್ದು, ಇದು ಸೌಕರ್ಯ, ಐಷಾರಾಮಿ ಜೀವನ ಮತ್ತು ಸಂತೋಷಕ್ಕೆ ಸಂಬಂಧಿಸಿದೆ. 12 ನೇ ಮನೆಯಲ್ಲಿ ಸೂರ್ಯನ ಸಂಚಾರ ಅಸ್ವಸ್ಥತೆ ಮತ್ತು ಸಂಪತ್ತಿನ ನಷ್ಟವನ್ನು ತರಬಹುದು. ವೃಷಭ ರಾಶಿಯವರು ತಮ್ಮ ವೃತ್ತಿಪರ ಕ್ಷೇತ್ರದಲ್ಲಿ ಅಡೆತಡೆಗಳನ್ನು ಅಥವಾ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯು ವೃತ್ತಿ ಬೆಳವಣಿಗೆ ಮತ್ತು ಗುರುತಿಸುವಿಕೆಗೆ ಸೂಕ್ತ ಸಮಯವಲ್ಲ. ಅಲ್ಲದೆ, ವ್ಯಾಪಾರದಲ್ಲಿರುವ ಸ್ಥಳೀಯರು ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು.

ಹಣಕಾಸಿನ ವಿಷಯದಲ್ಲಿ, 2024 ರಲ್ಲಿ ಸೂರ್ಯ ಸಂಕ್ರಮಣದ ಸಮಯದಲ್ಲಿ ಸ್ಥಳೀಯರು ಆರ್ಥಿಕ ಏರಿಳಿತಗಳಿಗೆ ಒಳಗಾಗಬಹುದು. ಗೃಹ ಸಂಬಂಧಿ ಖರ್ಚು ವೆಚ್ಚಗಳು ಹೆಚ್ಚಬಹುದು. ಅನಾವಶ್ಯಕ ಖರ್ಚುವೆಚ್ಚಗಳನ್ನು ಕಡಿತಗೊಳಿಸುವುದು ಸೂಕ್ತ. ಸಂಭಾವ್ಯ ಏರಿಳಿತಗಳ ಹೊರತಾಗಿಯೂ, ಈ ಅವಧಿಯು ವೃತ್ತಿಪರ ಮತ್ತು ಆರ್ಥಿಕ ಪ್ರಗತಿಗೆ ಅವಕಾಶಗಳನ್ನು ನೀಡುತ್ತದೆ.

ಸಂಬಂಧದ ವಿಷಯದಲ್ಲಿ, ವೃಷಭ ರಾಶಿಯ ಸ್ಥಳೀಯರು 2024 ರಲ್ಲಿ ಸೂರ್ಯ ಸಂಕ್ರಮಣದ ಸಮಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ಶ್ರೇಷ್ಠತೆಯ ಭಾವನೆಗಳಿಂದ ಅಥವಾ ಕುಟುಂಬದಲ್ಲಿ ಪ್ರಾಬಲ್ಯ ಸಾಧಿಸುವ ಪ್ರಯತ್ನಗಳಿಂದ ಸಂಘರ್ಷ ಉಂಟಾಗಬಹುದು. ವೃಷಭ ರಾಶಿಯವರು ತಮ್ಮ ತಾಯಿಯ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಕಾಳಜಿಯನ್ನು ಪ್ರದರ್ಶಿಸುವ ಮೂಲಕ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ, ಸಂಬಂಧಗಳಲ್ಲಿ ಸಾಮರಸ್ಯವನ್ನು ಪುನಃಸ್ಥಾಪಿಸಬಹುದು.

ಆರೋಗ್ಯದ ವಿಷಯದಲ್ಲಿ, ಈ ರಾಶಿಯವರು ಹೆಚ್ಚು ಗಮನ ಹರಿಸಬೇಕು. ವಿಶೇಷವಾಗಿ ಹೃದಯದ ಸಮಸ್ಯೆಗಳ ಇತಿಹಾಸವನ್ನು ಹೊಂದಿದ್ದಲ್ಲಿ ಗಮನ ಹರಿಸುವುದು ಸೂಕ್ತ. ಹೆಚ್ಚಿದ ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸ್ವಯಂ-ಆರೈಕೆ, ದಿನನಿತ್ಯದ ಕೆಲಸ ಕಾರ್ಯವನ್ನು ಸಮತೋಲನಗೊಳಿಸುವುದು ಮತ್ತು ಯಾವುದೇ ಸಂಭಾವ್ಯ ಆರೋಗ್ಯ ಸಮಸ್ಯೆಯನ್ನು ನಿಗ್ರಹಿಸಲು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅವಶ್ಯಕ.

ಪರಿಹಾರ: ಶಕ್ತಿ ಮತ್ತು ಸ್ಪಷ್ಟತೆಯನ್ನು ಹೆಚ್ಚಿಸಲು ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿ

ವಿ.ಸೂ: ಈ ಲೇಖನ ಮಾಹಿತಿಗಾಗಿ ಮಾತ್ರ. ಹೆಚ್ಚಿನ ಸ್ಪಷ್ಟತೆಗಾಗಿ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ

ಕೃಪೆ: ಆಸ್ಟ್ರೋ ಸೇಜ್