ನಿಮಗೆ ಸನ್ ಬರ್ನ್ ಸಮಸ್ಯೆ ಇದ್ಯಾ: ಇಲ್ಲಿದೆ ಸುಲಭ ಮನೆಮದ್ದು!

ಬಿಸಿಲಿಗೆ ಮೈ ಯೊಡ್ಡಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಅಲ್ವಾ? ಆದರೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ತಿಳಿಬಿಸಿಲಿಗೆ ಮೈಯೊಡ್ಡಬೇಕು ಅನ್ನೋದು ನಿಮಗೆ ಗೊತ್ತಿರಲಿ.
ಯಾಕೆಂದರೆ ಬೇರೆ ಸಮಯದಲ್ಲಿ ಬಿಸಿಲಿನಲ್ಲಿ ಇರುವಂತಹ ಯುವಿ ಕಿರಣಗಳು ದೇಹಕ್ಕೆ ಹಾನಿ ಉಂಟು ಮಾಡುವುದು. ದೀರ್ಘಕಾಲ ತನಕ ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಪರಿಣಾಮವಾಗಿ ತ್ವಚೆಯಲ್ಲಿ ಸುಟ್ಟ ಸಮಸ್ಯೆಯು ಕಾಣಿಸಬಹುದು. ಇವುಗಳನ್ನೇ ನಾವು ಸನ್ ಬರ್ನ್ ಎಂದು ಕರೆಯುತ್ತೆವೆ. ಇದರ ಸಮಸ್ಯೆ ಚರ್ಮ ಎದ್ದು ಬರುವುದು, ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸುವುದು ಮತ್ತು ಅತಿಯಾದ ನೋವು ಕಂಡುಬರಬಹುದು.

ರಮಿತಾ ಶೈಲೆಂದ್ರ ರಾವ್   ಬರೆದ ಬರಹ

ಬಿಸಿಲಿನಿಂದ ಆಗಿರುವಂತಹ ಗಾಯಕ್ಕೆ ಚಿಕಿತ್ಸೆ ನೀಡುವುದು ಅತೀ ಅಗತ್ಯವಾಗಿರುವುದು. ಇದಕ್ಕೆ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಹೆಚ್ಚಿನ ಸಮಸ್ಯೆಯು ಕಾಣಲು ಸಾಧ್ಯವಿಲ್ಲ. ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿ ಬಿಸಿಲಿನ ಸುಟ್ಟ ಗಾಯವನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ಯಾವುದೇ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ.

♦ ಹಸುವಿನ ಹಾಲು 

ತಣ್ಣಗಿನ ಹಾಲನ್ನು ಮುಖಕ್ಕೆ ಹಾಗೂ ಕೈಗಳಿಗೆ ಲೇಪಿಸುವ ಮೂಲಕ ಮುಖ ಕಪ್ಪಾಗುವುದನ್ನು ತಡೆಯಬಹುದು. ಮುಖ, ಕೈ ತೊಳೆದು ಕಪ್ಪಾಗಿರುವ ಭಾಗಕ್ಕೆ ಹಾಲನ್ನು ಹಚ್ಚಿ 10ರಿಂದ 15 ನಿಮಿಷಗಳ ಬಿಟ್ಟು ತೊಳೆದುಕೊಳ್ಳಿ.

 ತೆಂಗಿನ ಎಣ್ಣೆ, ಶ್ರೀಗಂಧದ ಹುಡಿ ಮತ್ತು ಬಾದಾಮಿ ಎಣ್ಣೆ

•ಒಂದು ಪಿಂಗಾಣಿಯಲ್ಲಿ ತೆಂಗಿನ ಎಣ್ಣೆ ಹಾಕಿ

•ಇದಕ್ಕೆ ಶ್ರೀಗಂಧದ ಹುಡಿ ಮತ್ತು ಬಾದಾಮಿ ಎಣ್ಣೆ ಹಾಕಿ ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.

•ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•ಇದು ಒಣಗುವ ತನಕ ಹಾಗೆ ಬಿಡಿ.

•ಬಳಿಕ ನೀರಿನಿಂದ ತೊಳೆಯಿರಿ.

ಗುಲಾಬಿ ದಳಗಳು :

ಹಾಲಿಗೆ ಗುಲಾಬಿ ದಳಗಳನ್ನು ಹಾಕಿ ಪೇಸ್ಟ್‌ ಮಾಡಿ ಲೇಪಿಸಿದರೂ ಸನ್‌ ಬರ್ನ್ಸ್‌ ನಿವಾರಣೆಯಾಗುತ್ತವೆ.

ಮೊಸರು 

ಮುಖ, ಕತ್ತು, ಕೈ, ಕಾಲುಗಳಿಗೆ ಕಡಲೆ ಹಿಟ್ಟು, ನಿಂಬೆ ರಸ, ಮೊಸರು ಮತ್ತು ಅರಿಶಿನವನ್ನು ಕಲಸಿ ಲೇಪಿಸಿದರೂ ಬೆಸ್ಚ್‌.

 ತೆಂಗಿನ ಎಣ್ಣೆ & ಅಲೋವೆರಾ :

1 ಚಮಚ ತೆಂಗಿನ ಎಣ್ಣೆ

2-3 ಚಮಚ ಅಲೋವೆರಾ ಲೋಳೆ

•ಪಿಂಗಾಣಿಯಲ್ಲಿ ತೆಂಗಿನ ಎಣ್ಣೆ ಹಾಕಿಕೊಳ್ಳಿ.

•ಇದಕ್ಕೆ ಅಲೋವೆರಾ ಲೋಳೆ ಹಾಕಿಕೊಳ್ಳಿ ಮತ್ತು ಸರಿಯಾಗಿ ಇವೆರಡನ್ನು ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•10-15 ನಿಮಿಷ ಕಾಲ ಹಾಗೆ ಬಿಡಿ.

•ಬಳಿಕ ನೀರು ಹಾಕಿ ತೊಳೆಯಿರಿ.

ಬಾಹ್ಯ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಮುಖ್ಯ ಅದನ್ನು ಹೆಚ್ಚಿಸಿಕೊಳ್ಳೋಣ…


»»ರಮಿತಾ ಶೈಲೆಂದ್ರ ರಾವ್
ಕಾರ್ಕಳ