ಚಾಮರ ಫೌಂಡೇಶನ್ ಉಚಿತ ಬೇಸಿಗೆ ಶಿಬಿರ ಆರಂಭ

ಮಂಗಳೂರು: ಚಾಮರ®️ ಫೌಂಡೇಶನ್ ದಿ.ಯತೀಶ್ ವೈ ಶೆಟ್ಟಿ ನೆನಪಿನಲ್ಲಿ ನಡೆಸುವ ಏಳು ದಿನಗಳ ಉಚಿತ ಬೇಸಿಗೆ ಶಿಬಿರ “ಬೇಸಿಗೆಗೊಂದು ಚಾಮರ 2024” ಮಂಗಳೂರಿನ ಕೆಮ್ರಾಲ್ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು.

ಸುಮಾರು 100 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದರು. ಈ ಬಾರಿಯ ಶಿಬಿರ ಸ್ಥಳೀಯ ವಿನಾಯಕ ಮಿತ್ರ ಮಂಡಳಿ ಹಾಗೂ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಇವರ ಸಹಭಾಗಿತ್ವದಲ್ಲಿ ನಡೆಯುತ್ತಿದೆ

ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ದನಂಜಯ್ ಪಿ ಶೆಟ್ಟಿಗಾರ್ ಮಾತನಾಡುತ್ತಾ ಇಂತಹ ಶಿಬಿರದಿಂದ ವಂಚಿತ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲಿ ಕಲಿತ ಕಲೆಗಳನ್ನು ಮುಂದಿನ ದಿನಗಳಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಸಂಘಟನೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಹಿರಿಯ ಪ್ರಾದ್ಯಾಪಕಿ ಮಂಜುಳಾ, ಶ್ರೀ ವಿನಾಯಕ ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ದಾಸ್, ಶಾಲಾಭಿವೃದ್ದಿಯ ಅಧ್ಯಕ್ಷ ದೇವರಾಜ, ಶ್ರೀ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ರಾಜೇಶ ಶೆಟ್ಟಿಗಾರ್, ಯಶೋದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತ್ರಿಶಾ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಚಾರುಶ್ರೀ ಪ್ರಾರ್ಥಿಸಿದರು. ಚಾಮರ ಫೌಂಡೇಶನ್ ಟ್ರಸ್ಟಿ ಮನೀಶ್ ಕೆ ಸಾಲಿಯಾನ್ ಸ್ವಾಗತಿಸಿದರು. ಚಾಮರ ಫೌಂಡೇಶನ್ ಮೆನೇಜಿಂಗ್ ಟ್ರಸ್ಟಿ ರಚನಾ ಪ್ರಾಸ್ಥಾವಿಕ ಮಾತನಾಡುತ್ತಾ ಟ್ರಸ್ಟಿನ ಉದ್ದೇಶ, ಮುಂದಿನ ಕಾರ್ಯಕ್ರಮಗಳನ್ನು ಸಭೆಗೆ ತಿಳಿಸಿದರು.

ಈ ಬೇಸಿಗೆ ಶಿಬಿರವನ್ನು ವಿಶೇಷವಾಗಿ ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಇಂತಹ ಶಿಬಿರದಿಂದ ವಂಚಿತರಾಗುವ ಮಕ್ಕಳಿಗಾಗಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಮಕ್ಕಳ್ಳಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆ ಹೀಗೆ ಹಲವಾರು ಸದುದ್ಧೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಚಾಮರ ಫೌಂಡೇಶನ್ 05 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಿದೆ.

ಮುಂದಿನ 7 ದಿನದಲ್ಲಿ ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ಸನಿಹಾ ಪುಜಾರಿ, ಡೊಲ್ವಿನ್ ಕೊಳಲಗಿರಿ, ಕರಣ್ ಆಚಾರ್ಯ,ಸೊಂದಾ ಭಾಸ್ಕರ ಭಟ್, ಜಯಶ್ರೀ ಶರ್ಮ, ತ್ರಿಷಾ ಶೆಟ್ಟಿ, ದರ್ಪಣ ಮುಂತಾದ ಮಂಗಳೂರು ಮತ್ತು ಉಡುಪಿಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಯೋಗ, ಮೈಮ್, ಕೋಲಾಜ್, ಬಾಟಲ್ ಆರ್ಟ್, ವರ್ಲಿ ಆರ್ಟ್ ಮುಂತಾದ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುವುದು.

ಶಿಬಿರದ ಸಮಾರೋಪ ಸಮಾರಂಭವು ಏಪ್ರಿಲ್ 17, ಬುಧವಾರ 11 : 30 ಬೆಳಿಗ್ಗೆ ನಡೆಯಲಿರುವುದು.