ಕಟಪಾಡಿ: ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ವತಿಯಿಂದ ರಜಾ ಮಜಾ -2024 ಮಕ್ಕಳ ಬೇಸಿಗೆ ಶಿಬಿರ

ಕಟಪಾಡಿ: ಎಸ್ ವಿ ಎಸ್ ವಿದ್ಯಾವರ್ಧಕ ಸಂಘ (ರಿ) ಕಟಪಾಡಿ ವತಿಯಿಂದ ರಜಾ ಮಜಾ -2024 ಮಕ್ಕಳ ಬೇಸಿಗೆ ಶಿಬಿರವು ಏಪ್ರಿಲ್ 8 ರಿಂದ ಏಪ್ರಿಲ್ 17 ರ ವರೆಗೆ 10 ದಿನಗಳ ಕಾಲ ಎಸ್ ವಿ ಎಸ್ ಆಂಗ್ಲ ಮಾದ್ಯಮ ಶಾಲಾ ವಠಾರದಲ್ಲಿ ಜರಗಲಿರುವುದು.

6 ರಿಂದ 16 ವರ್ಷದ ಮಕ್ಕಳು ಭಾಗವಹಿಸಲು ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ 8088143006 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

10 ದಿನಗಳ ಈ ಶಿಬಿರದಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಚಟುವಟಿಕೆಗಳನ್ನು ನಾಡಿನ ಪ್ರಸಿದ್ದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ತರಬೇತಿಯನ್ನು ನೀಡಲಿದ್ದಾರೆ.

ಮುಖ್ಯವಾಗಿ ವೆಂಕಿ ಪಲಿಮಾರು, ರಾಜೇಶ್ ಕಾಮತ್, ರಾಜೇಂದ್ರ ಭಟ್ ಬೆಳ್ಮಣ್, ರಮೇಶ್ ಬಂಟಕಲ್, ರಾಘವ್ ಸೂರಿ ಮಂಗಳೂರು, ಚಂದ್ರಕಲಾ ರಾವ್, ರಮಿತಾ ಶೈಲೇಂದ್ರ ಕಾರ್ಕಳ,ಮನೋಜ್ ಕಾಂಚನ್, ಭಾಗ್ಯಲಕ್ಷ್ಮೀ ಉಪ್ಪೂರು, ದೀಕ್ಷಾ ಸಾಲಿಯಾನ್, ಶ್ರುತಿ ಭಟ್ ಉದ್ಯಾವರ, ಪ್ರಥಮ್ ಕಾಮತ್ ಕಟಪಾಡಿ, ಮುಸ್ತಾಫಾ, ನಾಗೇಶ್ ಕಾಮತ್ ಹಾಗೂ ಇನ್ನಿತರರು ತರಬೇತಿಯನ್ನು ನೀಡಲಿದ್ದಾರೆ.

ಶಿಬಿರದ ಮುಖ್ಯ ಆಕರ್ಷಣೆಯಾಗಿ ಅಗ್ನಿಶಾಮಕ ದಳ ಉಡುಪಿ ಇವರಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ವ್ಯಕ್ತಿತ್ವ ವಿಕಸನ ತರಬೇತಿ, ಪಿಕ್ನಿಕ್, ಡ್ರಾಯಿಂಗ್,ಕ್ರಾಫ್ಟ್,ಮ್ಯಾಜಿಕ್, ಫೇಸ್ ಪೈಂಟಿಂಗ್,ಯೋಗ, ನೃತ್ಯ, ಸಂಗೀತ, ಟೆರಾಕೋಟ ಕಲೆ, ಮುಖವಾಡ ತಯಾರಿ, ಕಾಡಿನಲ್ಲಿ ಒಂದು ದಿನ, ಸ್ವಿಮ್ಮಿಂಗ್, ಮನೋರಂಜನಾ ಆಟಗಳು, ಇನ್ನೂ ಮುಂತಾದ ಹಲವು ಕಾರ್ಯಕ್ರಮಗಳು ಜರಗಲಿವೆ.

ಶಿಬಿರದಲ್ಲಿ ಝೀ ಕನ್ನಡ ಪಾರು ಧಾರಾವಾಹಿಯ ಬಾಲನಟಿ ಪ್ರಾನ್ವಿ ಅಕ್ಷಯ್ ಮಂಗಳೂರು ಹಾಗೂ ಜೂ. ರಿಷಭ್ ಶೆಟ್ಟಿ ಖ್ಯಾತಿಯ ಪ್ರದೀಪ್ ಆಚಾರ್ಯ ಶಿರ್ವ ಭಾಗವಹಿಸಲಿದ್ದಾರೆ.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಸಂಚಾಲಕ ಕೆ. ಸತ್ಯೇಂದ್ರ ಪೈ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ, ಶಿಕ್ಷಕೇತರ ಬಳಗದವರು ಶಿಬಿರದ ಕಾರ್ಯಕ್ರಮವನ್ನು ಸಂಘಟಿಸಲಿದ್ದು, ಕಾರ್ಯಕ್ರಮದ ಸಂಯೋಜನೆಯನ್ನು ಕಲಾವಿದ ನಾಗೇಶ್ ಕಾಮತ್ ಕಟಪಾಡಿ ನಿರ್ವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ದೇವೇಂದ್ರ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.