ಮಣಿಪಾಲ: ಟಿ.ವಿ, ಮೊಬೈಲ್ ಹಾಗೂ ಇಂಟರ್‌ನೆಟ್ ಆಕರ್ಷಣೆ ಇತ್ತೀಚೆಗೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಅರಿವೇ ಇಲ್ಲದಂತಾಗಿದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಮಣಿಪಾಲದ ಶ್ರೀ ಶಾರದಾ ಇನ್ಸ್ಟಿಟ್ಯೂಟ್‌ನಲ್ಲಿ ಎಪ್ರಿಲ್ 1 ರಿಂದ 12ವರೆಗೆ ಬೇಸಿಗೆ ಶಿಬಿರವನ್ನು 6 ರಿಂದ 13 ವರ್ಷದ ಒಳಗಿನ ಮಕ್ಕಳಿಗಾಗಿ
ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಕಥೆ, ಪ್ರಹಸನ, ಡಾನ್ಸ್, ಮುಖವಾಡ ಹಾಗೂ ಕ್ರಾಫ್ಟ್ ತಯಾರಿಕೆ, ಚಿತ್ರಕಲೆ, ಆಟೋಟ, ರಂಗೋಲಿ, ವಿಜ್ಞಾನ ಮಾದರಿ, ಯೋಗ, ಆಟೋಟ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ತರಬೇತಿಯ ಸಲಕರಣೆಗಳನ್ನು ನೀಡಲಾಯಿತು. ಶಿಬಿರದ ಕೊನೆಯಲ್ಲಿ ಪ್ರಮಾಣಪತ್ರ ಮತ್ತು ಮಕ್ಕಳು ಮಾಡಿದಂತಹ ವಿವಿಧ ಕ್ರಾಫ್ಟ್ಗಳನ್ನು ವಿತರಣೆ ಮಾಡಲಾಯಿತು. ಕೊನೆಯಲ್ಲಿ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.