ಮಂಗಳೂರು: ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ತತ್ವ ಸಿದ್ದಾಂತಕ್ಕೆ ಬೆಲೆ ಇಲ್ಲವೇ? ಎಂದು ಸುಳ್ಯ ಶಾಸಕ ಎಸ್ ಅಂಗಾರ ಅಸಮಾದಾನ ಹೊರಹಾಕಿದ್ದಾರೆ.ಜಿಲ್ಲೆಗೆ ಹಾಗೂ ನನಗೆ ಅನ್ಯಾಯವಾಗಿದೆ. ಕಳೆದ ಕೆಲವು ವರ್ಷಗಳಿಂದ ತತ್ವ ಸಿದ್ದಾಂತ ಒಪ್ಪಿ ಕೆಲಸ ಮಾಡಿದ್ದೆನೆ. ಇದೀಗ ಸಿದ್ದಾಂತಕ್ಕೆ ಬೆಲೆ ಇಲ್ಲದಂತೆ ಅಗಿದೆ. ಅದರೆ ತತ್ವ ಸಿದ್ದಾಂತವನ್ನು ಬಿಡಲು ನಾನು ತಯಾರಿಲ್ಲ. ಪಕ್ಷದ ಮೇಲೆ ಅಭಿಮಾನವಿಟ್ಟು ಬೆಂಗಳೂರಿಗೆ ಬಂದಿರುವ ನನ್ನ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದವರು ತಿಳಿಸಿದ್ದಾರೆ
.