ಮಂಗಳೂರು: ಡಿ.7: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಏಳನೇ ‘ವಿಶ್ವ ವಜ್ರಾ’ ಡೈಮಂಡ್ ಪ್ರದರ್ಶನ ಮತ್ತು ಮಾರಾಟ

ಮಂಗಳೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಏಳನೇ ‘ವಿಶ್ವ ವಜ್ರಾ’ ಡೈಮಂಡ್ ಪ್ರದರ್ಶನ ಮತ್ತು ಮಾರಾಟವನ್ನು ಮಂಗಳೂರು ಕಂಕನಾಡಿ ಬೈಪಾಸ್ ರಸ್ತೆಯ ತನ್ನ ಶೋರೂಂನಲ್ಲಿ ಡಿಸೆಂಬರ್ 7 ರಿಂದ 22ರ ವರೆಗೆ ಏರ್ಪಡಿಸಿದೆ.

ಬೃಹತ್ ಪ್ರದರ್ಶನ ಮತ್ತು  ಪ್ರಾತ್ಯಕ್ಷಿಕೆ

ದಕ್ಷಿಣ ಭಾರತದ ಬೃಹತ್ ಪ್ರದರ್ಶನ ಮಾರಾಟದಲ್ಲಿ ಜಗತ್ತಿನ ಪ್ರಮಾಣಿಕೃತ 10 ಸಾವಿರ ಕ್ಯಾರಟ್ ಗಿಂತಲೂ ಅಧಿಕ ವಜ್ರಾಭರಣಗಳಿರುತ್ತವೆ ಎಂದು ಸುಲ್ತಾನ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಡಾ| ಟಿ. ಎಂ. ಅಬ್ದುಲ್ ರಹೂಫ್ ತಿಳಿಸಿದ್ದಾರೆ ಮುಂಬೈಯ ತಜ್ಞರು ಈ ಸಂದರ್ಭ ವಜ್ರಾಭರಣಗಳ ಸಮಗ್ರ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ.

ಹೊಸ ಸರಣಿಯ ಆರಂಭರಣಗಳ ಭಾರೀ ಸಂಗ್ರಹ:

ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಅಮೇರಿಕ, ಸಿಂಗಾಪುರ, ಮಧ್ಯ ಪ್ರಾಚ್ಯಗಳ ವಜ್ರ, ಸಾಲಿಟೇರ್ ಸಂಗ್ರಹ ವಿಶೇಷ ಆಕರ್ಷಣೆಯಾಗಿರುತ್ತದೆ. ವಜ್ರದ ಲಗು ನೆಕ್ಲೆಸ್ 56 ಸಾವಿರ ರೂ., ವಜ್ರದ ಉಂಗುರ 6 ಸಾವಿರ ರೂ., ಮೂಗುತಿ 2 ಸಾವಿರ ರೂ. ಗಳಿಂದ ಲಭ್ಯವಿರುತ್ತದೆ ಮೆಟ್ರೋಗಳಲ್ಲಷ್ಟೇ ದೊರೆಯುವ 10 ಲಕ್ಷ ರೂ. ನಿಂದ 1 ಕೋಟಿ ರೂ. ಹೊರಗಿನ ಅತೀ ವಿಶಿಷ್ಟ ವಜ್ರಾಭರಣಗಳು ಇಲ್ಲಿವೆ. ವಧು ಗಳಿಗಾಗಿ ಹೊಸ ಸರಣಿಯ ಪಾಲ್ಕಿ ಅನ್ ಕಟ್ ಡೈಮಂಡ್, ನೀಲಪಟ್ಟಿ ಹರಳು ಸಹಿತ ದೊರೆಯುತ್ತವೆ.

ಪ್ರದರ್ಶನ ಅವಧಿಯಲ್ಲಿ ಗ್ರಾಹಕರು ಪ್ರತಿ ಕ್ಯಾರೆಟ್ ವಜ್ರಕ್ಕೆ 7 ಸಾವಿರ ರೂ. ರಿಯಾಯಿತಿ ಪಡೆಯಬಹುದು.

ಡಿ. 7ರಂದು ಉದ್ಘಾಟನೆ:

ಡಿ. 7ರಂದು ಸಂಜೆ ನಿಟ್ಟೆ ವಿವಿ ಕುಲಪತಿ ಎಂ ವಿನಯ್ ಹೆಗಡೆ ಅವರು ಪ್ರದರ್ಶನವನ್ನು ಉದ್ಘಾಟಿಸುವರು.
ಅಲ್ ಹಜ್ ಕೆ.ಎಸ್. ಮಹಮ್ಮದ್ ಮಸೂದ್, ಮಮ್ತಾಜ್ ಅಲಿ, ಅಬ್ದುಲ್ ರವೂಪ್ ಪುತ್ತಿಗೆ, ಮನ್ಸೂರ್ ಅಹ್ಮದ್ ಆಜಾದ್, ಅಬ್ದುಲ್ ರಹೀಮ್, ಗಣೇಶ್ ಬಂಗೇರ, ಅಹ್ಮದ್ ಶರೀಫ್, ಹಶೀರ್, ಶಮೀಮ್ ಕುಣಿಲ್, ಹಸೀನಾ ನೌಫಾಲ್ ಡಾ| ಶಾರದ ಬಂಗೇರ, ಹಲೀಮಾ ಶಹೀನ್, ಶರೀನ್ ಫಾತಿಮಾ, ಫಿಲೋಮಿನಾ, ಪೂರ್ಣಿಮಾ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.