ಸುಳ್ಯ: ಲಾರಿ-ಸ್ವಿಫ್ಟ್ ಕಾರು ಅಪಘಾತ ನಾಲ್ವರು ಸಾವು

ಮಂಗಳೂರು: ಸ್ವಿಫ್ಟ್ ಕಾರು ಮತ್ತು ಲಾರಿ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಂಗಳವಾರ ಸಂಭವಿಸಿದೆ.

ಮಡಿಕೇರಿ ನಾಪೋಕ್ಲು ಕೊಟ್ಟಮುಡಿ ನಿವಾಸಿಗಳಾದ ಹಸೈನಾರ್ ಹಾಜಿ, ಅವರ ಮಕ್ಕಳಾದ ಇಬ್ರಾಹಿಂ, ಅಬ್ದುಲ್  ರಹಿಮಾನ್ ಮತ್ತು ಹಾರೀಸ್ ಎಂಬವರು ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲ್ಸೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಈ ಅಪಘಾತ ನಡೆದಿದೆ.

ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ KA-12-MA-4587 ನೊಂದಣಿ ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರು ಮತ್ತು ಸುಳ್ಯದಿಂದ  ಮಂಗಳೂರು ಕಡೆಗೆ ಬರುತ್ತಿದ್ದ  KA-19-AA-9103 ನೊಂದಣಿ ಸಂಖ್ಯೆಯ ಈಚರ್ ಲಾರಿ ಮಧ್ಯೆ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಾವನ್ನಪ್ಪಿದ್ರೆ ಇನ್ನೋರ್ವ ಪ್ರಯಾಣಿಕ ಉಮ್ಮರ್  ಫಾರೂಕ್ ಎಂಬುವವರಿಗೆ ಗಾಯಗಳಾಗಿದೆ. ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆ ಮತ್ತು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.